ನ್ಯೂಸ್ ನಾಟೌಟ್ : ಸಲ್ಮಾನ್ ಖಾನ್, ಐಶ್ವರ್ಯ ರೈ ಬಚ್ಚನ್ ಹಾಗೂ ಅಜಯ್ ದೇವಗನ್ ಅಭಿನಯದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ಕತೆ ಇದು. ಆದರೆ, ಈ ಬಾಲಿವುಡ್ ಸಿನಿಮಾದ ಕತೆಯನ್ನೇ ಹೋಲುವ ಘಟನೆ ಬಿಹಾರದಲ್ಲಿ ನಡೆದಿದೆ. ಮದುವೆಯಾದ ಹೆಂಡತಿ ಇದಕ್ಕೂ ಮೊದಲು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಪರಿಸ್ಥಿತಿಯ ಒತ್ತಾಯಕ್ಕೆ ಮಣಿದು ನನ್ನನ್ನು ಮದುವೆಯಾದಳು ಎಂಬುದನ್ನು ತಿಳಿದ ಆತ, ತನ್ನ ಹೆಂಡತಿಯು ಹಳೆಯ ಲವ್ವರ್ ಜತೆ ಒಂದಾಗಿಸಲು ಮುಂದಾಗಿರುವ ಘಟನೆ ಬಿಹಾರದ ನಾವಡಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದದೆ.
ಹೆಂಡತಿಯು ಹಳೆಯ ಲವ್ವರ್ ಜತೆ ಇರುವುದನ್ನು ಕಂಡ ಪತಿಯು ಆಕೆಯನ್ನು ಹಳೆಯ ಲವ್ವರ್ ಜತೆ ಮದುವೆ ಮಾಡಿದ್ದಾರೆ. ಮಹಿಳೆಯು ರಾತ್ರಿ ತನ್ನ ಹಳೆಯ ಲವ್ವರ್ನನ್ನು ಭೇಟಿಯಾಗಲು ತೆರಳಿದ್ದಾಳೆ. ಗಂಡನು ಕೆಲಸಕ್ಕೆ ಹೋದ ಕಾರಣ ಆಕೆ ಪ್ರಿಯತಮನನ್ನು ಭೇಟಿಯಾಗಲು ಹೋಗಿದ್ದಾಳೆ.
ಹೀಗೆ ಭೇಟಿ ಮಾಡಿದಾಗ ಮಹಿಳೆಯ ಗಂಡನ ಸಂಬಂಧಿಕರು ಮಹಿಳೆಯನ್ನು ಆಕೆಯ ಲವ್ವರ್ ಜತೆ ಹಿಡಿದಿದ್ದಾರೆ. ಕೂಡಲೇ ಪತಿ ಸ್ಥಳಕ್ಕೆ ಆಗಮಿಸಿದ್ದಾರೆ. ಎಲ್ಲರೂ ಸೇರಿ ಆಕೆಯ ಲವ್ವರ್ನನ್ನು ಥಳಿಸಿದ್ದಾರೆ. ಬೆಳಗ್ಗೆತನಕ ಇಬ್ಬರನ್ನೂ ಕೂಡಿಹಾಕಿ, ಬೆಳಗ್ಗೆ ಮದುವೆ ಮಾಡಿಸಿದ್ದಾರೆ. ಲವ್ವರ್ ಆಕೆಯ ಹಣೆಗೆ ಸಿಂಧೂರ ಇಡುತ್ತಿರುವ ವಿಡಿಯೊ ವೈರಲ್ ಆಗಿದೆ. ಆದರೆ, ಮಹಿಳೆಯು ಅಳುತ್ತಿರುವ, ಲವ್ವರ್ ಜತೆ ಮದುವೆಯಾಗಲು ನಿರಾಕರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಆದರೂ, ಬಲವಂತವಾಗಿ ಮಹಿಳೆಯನ್ನು ಆಕೆಯ ಲವ್ವರ್ ಜತೆ ಮದುವೆ ಮಾಡಿಸಿದ್ದಾರೆ. ಮಹಿಳೆಯು ಮದುವೆಯಾಗಿ ಹಲವು ವರ್ಷಗಳಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ರಾತ್ರಿ ಪದೇಪದೆ ಲವ್ವರ್ನನ್ನು ಭೇಟಿಯಾದ ಪ್ರಕರಣವು ಪತಿ ಹಾಗೂ ಗ್ರಾಮಸ್ಥರನ್ನು ಕೆರಳಿಸಿದೆ. ಇದರಿಂದ ಬೇಸತ್ತ ಪತಿಯು ಕೊನೆಗೆ ಆಕೆಯನ್ನು ಲವ್ವರ್ ಜತೆ ಮದುವೆ ಮಾಡಿಸಿದ್ದಾರೆ ಎಂದು ವರದಿ ತಿಳಿಸಿದೆ.