ನ್ಯೂಸ್ ನಾಟೌಟ್: ಅಪ್ರಾಪ್ತ ಹುಡುಗಿಯನ್ನು ನಿರಂತರವಾಗಿ ಲವ್ ಮಾಡುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ SSLC ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೊಸಕೋಟೆಯ ಪಾರ್ವತಿಪುರದಲ್ಲಿ ದುರಂತ ನಡೆದಿದೆ. ಸಾರಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಅಂತ ಹೊಸಕೋಟೆ ಠಾಣೆಗೆ ಮೃತ ವಿದ್ಯಾರ್ಥಿನಿ ಪೋಷಕರಿಂದ ದೂರು ನೀಡಲಾಗಿದೆ. ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.
ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಮೃತ ಸಾರಾ ಓದುತ್ತಿದ್ದಳು. ಲವ್ ಮಾಡಲು ಒಪ್ಪದ ಕಾರಣ ಶಿಕ್ಷಕಿಯ ಮಗನಿಂದ ಲವ್ ಮಾಡುವಂತೆ ಕಿರುಕುಳ ನೀಡಲಾಗಿದೆ. ಬಾಲಕಿ ಸಾವಿನ ನಂತರ ವಿಚಾರ ಎಲ್ಲೂ ಬಾಯ್ಬಿಡದಂತೆ ಮೃತ ವಿದ್ಯಾರ್ಥಿನಿ ಸ್ನೇಹಿತರಿಗೆ ಶಿಕ್ಷಕಿಯಿಂದ ಧಮ್ಕಿ ಆರೋಪ ಮಾಡಲಾಗಿದೆ. ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.