ನ್ಯೂಸ್ ನಾಟೌಟ್: ‘ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿನಂತೆ ಉತ್ತರಪ್ರದೇಶದಲ್ಲಿ ವಿಚಿತ್ರ ಮದುವೆಯೊಂದು ನಡೆದಿದೆ. ಚಿಕ್ಕಪ್ಪನನ್ನೇ ಪ್ರೀತಿಸಿ ಮಗಳು ಮದುವೆಯಾಗಿರುವ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ.
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ತಾಜುದ್ದೀನ್ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಆದರೆ ಇಬ್ಬರೂ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿವಾಹಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಶುಭಂ ಎನ್ನುವ ವ್ಯಕ್ತಿ ತನ್ನ ಸ್ವಂತ ಅಣ್ಣನ ಮಗಳಾದ ರಿಯಾಳನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ಮದುವೆಯಾಗಿದ್ದಾನೆ. ಇವರಿಬ್ಬರು ಸಂಬಂಧದಲ್ಲಿ ತಂದೆ ಮಗಳು ಆಗಬೇಕು. ಹೀಗಾಗಿ ಆರಂಭದಲ್ಲಿ ಕುಟುಂಬವು ಇವರ ಸಂಬಂಧವನ್ನು ವಿರೋಧಿಸಿತ್ತು. ಆದರೆ ಅಂತಿಮವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿ ವಿರೋಧದ ನಡುವೆ ಮದುವೆ ನಡೆದಿದೆ.
ಕುಟುಂಬಸ್ಥರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾವಿಬ್ಬರೂ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ, ಹೀಗಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆಂದು ಶುಭಂ ಮತ್ತು ರಿಯಾ ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಮನೆಯವರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ವಿಧಿಯಿಲ್ಲದೆ ಇವರ ಮದುಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.