ನ್ಯೂಸ್ ನಾಟೌಟ್ :ಕನ್ನಡ ಚಿತ್ರರಂಗವಲ್ಲದೇ ಪರಭಾಷಾ ಚಿತ್ರಗಳಲ್ಲಿಯೂ ನಟಿಸಿದ ನಟ ಕಿಚ್ಚ ಸುದೀಪ್ ಅವರಿಗೆ ಇಡೀ ದೇಶದಾದ್ಯಂತ ಕೊಟ್ಯಂತರ ಅಭಿಮಾನಿಗಳಿದ್ದಾರೆ.ಚಿಕ್ಕ ಮಕ್ಕಳಿಗೂ ಕೂಡ ಕಿಚ್ಚ ಸುದೀಪ್ ಅವರನ್ನು ಕಂಡ್ರೆ ತುಂಬಾ ಪ್ರೀತಿ.ಇದೀಗ ತನ್ನ ಮೇಲೆ ಅಪಾರ ಅಭಿಮಾನ ತೋರುವ ಕ್ಯಾನ್ಸರ್ ಪೀಡಿತ ಬಾಲಕಿಯನ್ನು ಭೇಟಿಯಾಗಲು ಕಿಚ್ಚ ಸುದೀಪ್ ಅವರು ಆಸ್ಪತ್ರೆಗೆ ತೆರಳಿದ್ದಾರೆ.ಆಕೆಯ ಆರೋಗ್ಯವನ್ನು ವಿಚಾರಿಸಿದ್ದಾರೆ.
ಹೌದು,ಕಿಚ್ಚ ಸುದೀಪ್ ಅವರನ್ನು ಒಮ್ಮೆ ಭೇಟಿಯಾಗಬೇಕು.ಅವರೊಂದಿಗೆ ಮಾತಾಡಬೇಕು ಅಂದು ಕೊಂಡಿದ್ದ ಆ ಬಾಲಕಿ ಕನಸನ್ನು ಕಿಚ್ಚ ಸುದೀಪ್ ಅವರು ನನಸು ಮಾಡಿದ್ದಾರೆ. ಬಾಲಕಿ ಸಾಕ್ಷಿ ನಾಳೆಯಿಂದ ಸ್ಪೆಷಲ್ ಟ್ರೀಟ್ ಮೆಂಟ್ ಗೆ ತೆರಳುತ್ತಾಳೆ ಎಂಬ ವಿಷಯ ತಿಳಿದು ಮಗುವಿನ ಜತೆ ಕೆಲ ಹೊತ್ತು ಸಮಯವನ್ನು ಸುದೀಪ್ ಕಳೆದಿದ್ದಾರೆ.ಈ ಸಂದರ್ಭ ಸುದೀಪ್ ಬಾಲಕಿಗೆ ಆಟೋಗ್ರಾಫ್ ನೀಡಿದ್ದು ಬ್ಯಾಗ್ ಹಾಗೂ ಇತರ ವಸ್ತುಗಳನ್ನು ನೀಡಿ ಮಗುವನ್ನು ಖುಷಿಪಡಿಸಿದ ಫೋಟೋ ಭಾರಿ ವೈರಲ್ ಆಗುತ್ತಿದೆ.
ಈಕೆ ಮೂರನೇ ತರಗತಿಯಲ್ಲಿ ಓದುತ್ತಿದ್ದು ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಗೆ 9 ವರ್ಷ ವಯಸ್ಸಾಗಿದ್ದು ಮೆಟಾಸ್ಟಾಟಿಕ್ ಅಲ್ಲದ ಆಸ್ಟಿಯೊಸಾರ್ಕೊಮಾದಿಂದ ಬಳಲುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಅಂದಹಾಗೆ ಸುದೀಪ್ ಅಂದ್ರೆ ಯಾಕೆ ಅಷ್ಟೊಂದು ಇಷ್ಟ.ಅವರನ್ನೇ ಏಕೆ ಭೇಟಿಯಾಗಬೇಕು ಎಂದು ಕೇಳಿದ್ದಕ್ಕೆ ಆಕೆ, “ನನಗೆ ಸುದೀಪ್ ಎಂದರೆ ಬಹಳ ಅಭಿಮಾನ” ಎಂದಿದ್ದಾಳೆ. ಆಕೆಗೆ ಸುದೀಪ್ ಅವರು ನಟಿಸಿದ ಎಲ್ಲಾ ಹಾಡುಗಳು ಇಷ್ಟವಾಗುತ್ತಿದ್ದು ಅದರಲ್ಲೂ ‘ರನ್ನ’ ಚಿತ್ರದ ತಿತಿಲಿ ಹಾಡು ಎಂದರೆ ಬಹಳ ಇಷ್ಟ ಎಂದಿದ್ದಾಳೆ…