ನ್ಯೂಸ್ ನಾಟೌಟ್ :ಲಾಟರಿ ಟಿಕೆಟ್ ಖರೀದಿಸಿ ಎಷ್ಟೋ ಜನ ಮನೆ ಮಠ ಕಳೆದು ಕೊಂಡು ದಿವಾಳಿಯಾದ ಘಟನೆ ನಡೆದಿದೆ.ಆದರೆ ಇನ್ನೂ ಕೆಲವರಿಗೆ ಅದೃಷ್ಟ ಖುಲಾಯಿಸಿ ಶ್ರೀಮಂತರಾಗಿರುವ ಘಟನೆಯೂ ನಡೆದಿದೆ. ಈ ಅದೃಷ್ಟಕ್ಕೆ ಕೇರಳದ 11 ಮಹಿಳಾ ಪೌರ ಕಾರ್ಮಿಕರೇ ಸಾಕ್ಷಿಯಾಗಿದ್ದು ವಿಶೇಷ.
ಹೌದು,ಕೇರಳದಲ್ಲಿ ಇಂತಹ ರೋಚಕ ಘಟನೆ ವರದಿಯಾಗಿದ್ದು,ಕೇವಲ 250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿದ್ದು,11 ಮಂದಿ ಪೌರ ಕಾರ್ಮಿಕರಿಗೆ 10 ಕೋಟಿ ರೂ. ಬಂಪರ್ ಲಾಟರಿ (Kerala Lottery) ಹೊಡೆದಿದೆ.ಈ ಮೂಲಕ ಇತರರು ಹಬ್ಬೇರಿಸುವಂತೆ ಮಾಡಿದ್ದಾರೆ.ನಿನ್ನೆ-ಮೊನ್ನೆಯ ತನಕ ಪುರಸಭೆ ವ್ಯಾಪ್ತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯರೀಗ ಅದೃಷ್ಟಲಕ್ಷ್ಮೀಯರಾಗಿದ್ದು ಆಶ್ಚರ್ಯಕಾರಿ ವಿಷಯ.
ಮಲಪ್ಪುರಂ ಜಿಲ್ಲೆ ಪರಪ್ಪನಂಗಡಿ ಪುರಸಭೆಯ ಹರಿತಾ ಕರ್ಮ ಸೇನಾದ 11 ಮಹಿಳಾ ಕಾರ್ಮಿಕರು ಈಗ ಅದೃಷ್ಟದ ಕದ ತಟ್ಟಿದವರು.ಇವರು 2023ರ ಮುಂಗಾರು ಬಂಪರ್ ಲಾಟರಿ (Monsoon Bumper) ಖರೀದಿಸಿದ್ದು, 250 ರೂಪಾಯಿಯ ಲಾಟರಿ ಟಿಕೆಟ್ ಈಗ ಅವರ ಜೀವನವನ್ನೇ ಬದಲಿಸುವಂತೆ ಮಾಡಿದೆ.ಈ ಬಗ್ಗೆ ಮಹಿಳೆಯವರು ಕೂಡ ಫುಲ್ ಹ್ಯಾಪಿಯಾಗಿದ್ದಾರೆ.ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.ಇದುವರೆಗೆ ಇವರು ಮೂರು ಬಾರಿ ಲಾಟರಿ ಟಿಕೆಟ್ ಖರೀದಿಸಿದ್ದರೂ ಅದೃಷ್ಟ ಬಾರದೇ ಈಗ ನಾಲ್ಕನೇ ಬಾರಿ ಖರೀದಿಸಿದಾಗ ಅದೃಷ್ಟ ಖುಲಾಯಿಸಿದೆ.
11 ಮಹಿಳಾ ಕಾರ್ಮಿಕರಲ್ಲಿ ರಾಧಾ ಎಂಬುವರು ಹೀಗೆ ಮಾತನಾಡುತ್ತಾ ಲಾಟರಿ ಟಿಕೆಟ್ ಖರೀದಿಸೋಣವೇ ಎಂದು ಹೇಳಿದ್ದು ಅವರೆಲ್ಲರೂ ಈಗ ಕೋಟ್ಯಾಧೀಶೆಯರಾಗಿದ್ದಾರೆ.ಟಿಕೆಟ್ ಖರೀದಿಸುವ ಮುಂಚೆ ಮಹಿಳಾ ಕಾರ್ಮಿಕರು ಒಪ್ಪಿಗೆ ಸೂಚಿಸಿದ್ದು, ಎಲ್ಲರೂ ಒಂದಿಷ್ಟು ಮೊತ್ತ ಹಾಕಿ 250 ರೂ. ಕಲೆಕ್ಟ್ ಮಾಡಿ ಟಿಕೆಟ್ ಖರೀದಿಸಿದ್ದಾರೆ.ಈಗ ಅವರಿಗೆ 10 ಕೋಟಿ ರೂ. ಬಂದಿದ್ದು ಅವರ ಜೀವನವನ್ನೇ ಬದಲಾಯಿಸಿದೆ. ಲಾಟರಿಯ 10 ಕೋಟಿ ರೂಪಾಯಿಯಲ್ಲಿ ಏಜೆಂಟ್ ಕಮಿಷನ್ ಹಾಗೂ ಆದಾಯ ತೆರಿಗೆ ಕಡಿತವಾಗಿ 11 ಮಹಿಳೆಯರಲ್ಲಿ ಒಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಕೇರಳದಲ್ಲಿ ಪ್ರಮುಖ ಹಬ್ಬಗಳು ಸೇರಿದಂತೆ ಕೆಲ ಸಂದರ್ಭಗಳಲ್ಲಿ ವಿಶೇಷವಾಗಿ ಲಾಟರಿ ಆಯೋಜನೆ ಮಾಡುವುದಿದೆ. ಇದೀಗ ಮುಂಗಾರು ಲಾಟರಿ ಜುಲೈ 26ರಂದು ಘೋಷಣೆಯಾದಾಗ, ಪೌರ ಕಾರ್ಮಿಕರು ಅದನ್ನು ಖರೀದಿಸಿದ್ದಾರೆ. ಆದರೆ ಮಹಿಳೆಯರಿಗೆ ಈ ಬಂಪರ್ ಲಾಟರಿ ಲಭಿಸಿದ್ದು ಅವರನ್ನು ಅವರೇ ನಂಬದ ಪರಿಸ್ಥಿತಿಗೆ ತಲುಪಿಸುವಂತೆ ಮಾಡಿದೆ.
ಈ ಖುಷಿಯಲ್ಲಿ ಮಾತನಾಡಿರುವ ಮಹಿಳೆಯರು “ನಾವಿದನ್ನು ನಿರೀಕ್ಷೆ ಮಾಡಿಯೇ ಇರಲಿಲ್ಲ. 11 ಜನರೂ ಸಮನಾಗಿ ದುಡ್ಡು ಹಾಕಿ 250 ರೂ. ಹೊಂದಿಸಿ 250 ರೂ. ಹಣ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದೆವು.ನಾವು ಇಷ್ಟು ದಿನ ಕಷ್ಟ ಪಟ್ಟು ದುಡಿಯುತ್ತಿದ್ದೆವು.ಜೀವನದಲ್ಲಿ ಹಣಕ್ಕಾಗಿ ಎಷ್ಟೆಲ್ಲಾ ನೋವನ್ನು ಅನುಭವಿಸಿದ್ದೇವೆ.ಈ ಬಂಪರ್ ಲಾಟರಿ ನಮ್ಮ ಪಾಲಾಗಿದ್ದು,ನಾವು ಕಂಡ ಕನಸಿಗೆ ಪುಷ್ಟಿ ನೀಡಿದಂತಾಗಿದೆ.ಕೆಲವೊಂದು ನಮ್ಮದೇ ಆದ ಕನಸುಗಳಿದ್ದವು.ಅವುಗಳನ್ನು ಪರಿಪೂರ್ಣ ಮಾಡಿಕೊಳ್ಲೋದಕ್ಕೆ ಈ ಹಣ ನೆರವಾಗಬಹುದು ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.