ನ್ಯೂಸ್ ನಾಟೌಟ್: ಒಂದು ಕಡೆ ಹಿಂದೂ-ಮುಸ್ಲಿಂ ಸಹೋದರರಂತೆ ಜೀವಿಸಬೇಕು ಅನ್ನುವ ಹೇಳಿಕೆಗಳು ಕೇಳಿ ಬರುತ್ತಿದ್ದರೆ ಮತ್ತೊಂದು ಕಡೆ ದೇವಸ್ಥಾನದ ಎದುರೇ ಹಿಂದೂಗಳನ್ನು ನೇಣಿಗೆ ಹಾಕ್ತೇವೆ ಅನ್ನುವ ವಿವಾದಾತ್ಮಕ ಘೋಷಣೆಯೊಂದು ಕೇಳಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳ ರಾಜ್ಯದ ಕಾರಗೋಡಿನಿಂದ ಇಂತಹದ್ದೊಂದು ಘಟನೆ ನಡೆದಿದ್ದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಎದುರೇ ಹಿಂದೂಗಳನ್ನು ನೇಣಿಗೆ ಹಾಕ್ತೇವೆ ಅನ್ನುವ ಘೋಷಣೆ ಕೇರಳ ಮುಸ್ಲಿಂ ಲೀಗ್ ಜಾಥಾದಲ್ಲಿ ಕೇಳಿ ಬಂದಿದೆ. ಮಾತ್ರವಲ್ಲ ದೇವಾಲಯವನ್ನೇ ಸುಟ್ಟು ಹಾಕ್ತೇವೆ ಅನ್ನುವ ಘೋಷಣೆಯೊ ಕೇಳಿ ಬಂದಿರುವುದಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ರಾಷ್ಟ್ರೀಯವಾದಿ ಕೆಲ ನಾಯಕರು ಹಾಗೂ ಬಲಪಂಥೀಯವಾದಿಗಳು ಈ ಪ್ರಚೋದನಕಾರಿ ಹೇಳಿಕೆಯನ್ನು ಟೀಕಿಸಿವೆ. ಬಿಜೆಪಿ ಐಟಿ ಸೆಲ್ನ ಮಾಜಿ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ನ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಯುವ ಘಟಕವು ಕೇರಳದ ಕಾಸರಗೋಡಿನಲ್ಲಿ ಜಾಥಾ ನಡೆಸಿ, ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ. ಅವರನ್ನು (ಹಿಂದೂಗಳನ್ನು) ದೇವಾಲಯಗಳ ಮುಂದೆ ನೇತುಹಾಕಿ ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದೆ. ಪಿಣರಾಯಿ ಸರ್ಕಾರ ಅವರನ್ನು ಬೆಂಬಲಿಸದಿದ್ದರೆ ಅವರು ಇಂಥ ಮಾತುಗಳನ್ನು ಘೋಷಣೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ಕೇರಳದಲ್ಲಿ ಈಗ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸುರಕ್ಷಿತವಾಗಿದ್ದಾರೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಇಂಥದ್ದೇ ಇನ್ನೊಂದು ಘಟನೆ ನಡೆದಿತ್ತು. ತಂದೆಯ ಹೆಗಲ ಮೇಲೆ ಕುಳಿತಿದ್ದ 7 ವರ್ಷದ ಹುಡುಗನೊಬ್ಬ, ‘ಹಿಂದುಗಳು ಹಾಗೂ ಕ್ರಿಶ್ಚಿಯನ್ನರು ಅಕ್ಕಿ, ಹೂವು ಮತ್ತು ಕರ್ಪೂರ ಸಿದ್ಧವಾಗಿಟ್ಟುಕೊಳ್ಳಿ, ನಿಮ್ಮ ಅಂತಿಮ ಸಂಸ್ಕಾರಕ್ಕೆ ಬೇಕಾಗುತ್ತದೆ’ ಎನ್ನುವ ಘೋಷಣೆಯನ್ನು ಕೂಗಿದ್ದ. ಕೇರಳ ಈಗ ಉಗ್ರ ಆಮೂಲಾಗ್ರೀಕರಣದ ಹೊಸ ಕೂಪವಾಗಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.