ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕಡಬ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕುಟ್ರುಪಾಡಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣಗೊಂಡ “ಗ್ರಾಮ ಪಂಚಾಯತ್ ಸಭಾಂಗಣ” ಇಂದು (ಜುಲೈ 2) ರಂದು ಶಾಸಕಿ ಭಾಗೀರಥಿ ಮುರಳ್ಯ ಉದ್ಘಾಟಿಸಿದರು.
ಬಳಿಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದರು ಮತ್ತು ಬಳಿಕ ಘನ ತ್ಯಾಜ್ಯ ಘಟಕದ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋನಪ್ಪ ಗೌಡ, ಅಧ್ಯಕ್ಷರು, ಗ್ರಾಮ ಪಂಚಾಯತ್ ಕುಟ್ರುಪ್ಪಾಡಿ, ಶಿವಪ್ರಸಾದ್ ಪುತ್ತಿಲ ಅಧ್ಯಕ್ಷರು, ಸಿ.ಎ ಬ್ಯಾಂಕ್ ಹೊಸ್ಮಠ, ಕಡಬ ಗ್ರಾಮ ಪಂಚಾಯತ್ ನ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಭರತ್ ಬಿಯಂ, ಕಡಬದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಶೆಟ್ಟಿ , ಕಡಬದ ಜಿ.ಪಂ. ಸಹಾಯಕ ಅಭಿಯಂತರರು ಸಂಗಪ್ಪ ಹುಕ್ಕೇರಿ, ಗ್ರಾಮ ಪಂಚಾಯತ್ ಕುಟ್ರುಪ್ಪಾಡಿಯ ಉಪಾಧ್ಯಕ್ಷರು ವಾಣಿ ನಾಗೇಶ್, ಗ್ರಾಮ ಆಡಳಿತ ಅಧಿಕಾರಿ ಶ್ರೀರಾಜ್, ಪಂಚಾಯತ್ ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಸ್ಯ ರೈ ಮತ್ತಿತರರು ಉಪಸ್ಥಿತರಿದ್ದರು.