ನ್ಯೂಸ್ ನಾಟೌಟ್: ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಗೃಹ ಲಕ್ಷ್ಮೀ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಆದೇಶ ಪತ್ರವನ್ನು ಗ್ರಾಮ ಪಂಚಾಯತ್ ನಲ್ಲಿ ಪಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಕೆ.ಎಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ, ಕಾರ್ಯದರ್ಶಿ ಸುಂದರ ಎಂ, ಚಿದಾನಂದ ಡಿ. ಬಿಲ್ ಕಲೆಕ್ಟರ್, ದೇವಿಪ್ರಸಾದ್ ಎ. ಡಾಟಾ ಎಂಟ್ರಿ ಆಪರೇಟರ್ , ಕಿಶೋರ್ ಕುಮಾರ್ ಡಾಟಾ ಎಂಟ್ರಿ ಆಪರೇಟರ್, ಭವ್ಯ , ಜಲ ಪ್ರೇರಕಿ ಉಪಸ್ಥಿತರಿದ್ದರು.