ನ್ಯೂಸ್ ನಾಟೌಟ್: ಭಾರತದ ಮಾರುಕಟ್ಟೆಗೆ ಬಹು ನಿರೀಕ್ಷಿತ ಹುಂಡೈ ಎಕ್ಸ್ಟರ್ SUV ಕಾರು ಇಂದು ಬಿಡುಗಡೆಯಾಗಿದೆ. ಮಧ್ಯಮ ವರ್ಗದ ಗ್ರಾಹಕರನ್ನೇ ಗಮನದಲ್ಲಿಟ್ಟುಕೊಂಡಿರೋ ಹುಂಡೈ ಕಂಪನಿ ಹೊಚ್ಚ ಹೊಸ ಡಿಸೈನ್ ಹಾಗೂ ಹಲವು ವಿಶೇಷತೆಗಳೊಂದಿಗೆ ಅತ್ಯಂತ ಕಡಿಮೆ ಬೆಲೆಗೆ ಎಕ್ಸ್ಟರ್ SUV ಕಾರನ್ನು ಪರಿಚಯಿಸಿದೆ. ಟಾಟಾ ಮೋಟಾರ್ಸ್, ಮಹಿಂದ್ರಾ, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳ ಕಾರುಗಳ ದುಬಾರಿ ಬೆಲೆಗೆ ಸೆಡ್ಡು ಹೊಡೆದಿರೋ ಹುಂಡೈ ತನ್ನ ಎಕ್ಸ್ಟರ್ SUV ಕಾರನ್ನು 5,99,900 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದೆ.
ಹಲವು ವಿಶೇಷತೆಗಳನ್ನು ಒಳಗೊಂಡಿರೋ ಹುಂಡೈ ಎಕ್ಸ್ಟರ್ SUV ಕಾರನ್ನು ಭಾರತದಲ್ಲಿ ಎಕ್ಸ್ ಶೋರೂಮ್ ದರ 6 ಲಕ್ಷ ರೂಪಾಯಿಗೆ ಕೊಂಡುಕೊಳ್ಳಬಹುದಾಗಿದೆ. ಈ ಕಾರಿನಲ್ಲಿರುವ ವಿಶೇಷತೆಗಳು ಹಾಗೂ ಡಿಸೈನ್ ಭಾರತದ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಈ ಮೊದಲೇ ಹೇಳಿದಂತೆ ಹುಂಡೈ ಎಕ್ಸ್ಟರ್ SUV ಕಾರು, ಟಾಟಾ ಮೋಟಾರ್ಸ್, ಮಹಿಂದ್ರಾ, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳ ಕಾರುಗಳಿಗೆ ಸವಾಲಾಗಿ ಪರಿಣಮಿಸಲಿದೆ.
ಭಾರತದಲ್ಲಿ ಇಷ್ಟು ದಿನ SUV ಅಂದ್ರೆ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕಾರುಗಳನ್ನ ಟಾಟಾ ಮೋಟಾರ್ಸ್, ಮಹಿಂದ್ರಾ, ಮಾರುತಿ ಸುಜುಕಿ ಮಾರಾಟ ಮಾಡುತ್ತಿದ್ದವು. ಟಾಟಾ ಮೋಟಾರ್ಸ್ನ ಪಂಚ್ 8 ಲಕ್ಷ ರೂಪಾಯಿ, ಮಹಿಂದ್ರಾ XUV 300 8.41 ಲಕ್ಷ, ಮಾರುತಿ ಸುಜುಕಿ ಬ್ರಿಜಾ 8.29 ಲಕ್ಷ ರೂಪಾಯಿಯಿಂದ 14.14 ಲಕ್ಷ ರೂಪಾಯಿವರೆಗೂ ಲಭ್ಯವಿದೆ. ಇದೀಗ ಈ ದರ ಸಮರದಲ್ಲಿ ಎಲ್ಲವನ್ನೂ ಹಿಂದಿಕ್ಕಿರುವ ಹುಂಡೈ ತನ್ನ ಎಕ್ಸ್ಟರ್ SUV ಕಾರನ್ನು ಬರೀ 6 ಲಕ್ಷ ರೂಪಾಯಿಗೆ, ಎಕ್ಸ್ಟರ್ CNG ಕಾರನ್ನು 8.24 ಲಕ್ಷ ರೂಪಾಯಿಗೆ ಮಾರಾಟ ಮಾಡುವುದಾಗಿ ಘೋಷಿಸಿದೆ.
ಹುಂಡೈ ಎಕ್ಸ್ಟರ್ SUVನಲ್ಲಿ ಸನ್ರೂಫ್, ಪ್ಯಾಡಲ್ ಶಿಫ್ಟರ್ಗಳು, 6 ಏರ್ಬ್ಯಾಗ್ಗಳನ್ನು ನೀಡಲಾಗುತ್ತಿದೆ. 8 ಇಂಚಿನ HD ಟಚ್ ಸ್ಕ್ರೀನ್ ಇರಲಿದೆ. 4.2 ಇಂಚಿನ ಕಲರ್ MID, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್ಲೆಸ್ ಚಾರ್ಜಿಂಗ್, ವಾಯ್ಸ್ ಕಮಾಂಡ್ಸ್ ಮತ್ತು ಅಲೆಕ್ಷಾ ಫಂಕ್ಷನ್ ಕೂಡ ಈ ಕಾರು ಒಳಗೊಂಡಿದೆ.