ನ್ಯೂಸ್ ನಾಟೌಟ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಮಂಗಳೂರು ನಗರದ ಪಿ.ವಿ.ಎಸ್ ವೃತ್ತದಿಂದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಹಂಪನಕಟ್ಟೆ ಬರುವ ಕೈಬರ್ ಪಾಸ್ ಲೇನ್ನ ರಸ್ತೆಯಲ್ಲಿ ಗುಡ್ಡ ಕುಸಿದಿದೆ.
ಗುಡ್ಡ ಕುಸಿತದ ಮೇಲ್ಭಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ನೂರಾರು ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಈ ಭಾಗದಲ್ಲಿ ಭೂ ಕುಸಿತ ಉಂಟಾದ ಕಾರಣ ಸಂಚಾರಕ್ಕೆ ಅಲ್ಪ ಪ್ರಮಾಣದಲ್ಲಿ ತೊಂದರೆಯಾಗಿದೆ. ಮತ್ತಷ್ಟು ಭೂ ಕುಸಿತ ಉಂಟಾದರೆ ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಆತಂಕ ಎದುರಾಗಿದೆ.