ನ್ಯೂಸ್ ನಾಟೌಟ್ : ಒಂದು ದಿನ ಸರಿಯಾದ ನಿದ್ದೆ ಬಂದಿಲ್ಲ ಅಂದ್ರೆ ಆ ದಿನ ಸಮಾಧಾನವೇ ಇಲ್ಲದಾಗಿ ಪರಿಣಮಿಸುತ್ತೆ.ಆರೋಗ್ಯವನ್ನೇ ಕಳೆದುಕೊಂಡ ಭಾವನೆ ಮೂಡುತ್ತೆ.ಕ್ಷಣ ಕ್ಷಣವೂ ಆಕಳಿಕೆ ಬಂದುಬಿಡುತ್ತೆ..ಆದರೆ ಇಲ್ಲೊಬ್ಬರು ವ್ಯಕ್ತಿ ಬರೋಬ್ಬರಿ 60 ವರ್ಷಗಳ ಕಾಲ ನಿದ್ದೆಯನ್ನೇ ಮಾಡಿಲ್ವಂತೆ!ಹೌದು, ನಿಮ್ಗೆ ಆಶ್ಚರ್ಯವಾದ್ರೂ ಇದು ಸತ್ಯ..!
ವಿಯೆಟ್ನಾಂನ ವ್ಯಕ್ತಿಯೊಬ್ಬರಿಗೆ ತಮ್ಮ ಬಾಲ್ಯದಲ್ಲಿ ಜ್ವರದಿಂದ ನಿದ್ದೆ ಮಾಡಲು ಅಸಮರ್ಥರಾದ ನಂತರ ಒಮ್ಮೆಯೂ ನಿದ್ದೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಥಾಯ್ ಎನ್ಗೊಕ್ ಎಂಬ ವ್ಯಕ್ತಿ ಈ ಸಮಸ್ಯೆಯಿಂದ ಬಳಲುತ್ತಿದ್ದವರು.ಇವರ ಪ್ರಾಯ ಇದೀಗ 80 ವರ್ಷ. 1962ರಿಂದ ನಿದ್ದೆಯ ಕೊರತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಅಂದ ಹಾಗೆ ಥಾಯ್ ಎನ್ಗೊಕ್ ಮಲಗಿದ್ದನ್ನು ನೋಡಿಲ್ಲ ಎಂದು ಅವರ ಕುಟುಂಬ ಸದಸ್ಯರು, ಸ್ನೇಹಿತರು, ನೆರೆಮನೆಯವರು ಸಹ ತಿಳಿಸಿದ್ದಾರೆ. ಅನೇಕ ವೈದ್ಯಕೀಯ ತಜ್ಞರು ಅವರ ಅಸ್ವಸ್ಥತೆಯನ್ನು ಪರೀಕ್ಷಿಸಿದ್ದು, ಥಾಯ್ ಎನ್ಗೊಕ್ ಹಲವಾರು ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ..!
ಈ ವಿಷಯ ತಿಳಿದು ಯೂಟ್ಯೂಬರ್ ಒಬ್ಬರು ಥಾಯ್ ನಿದ್ದೆ ಮಾಡುತ್ತಿಲ್ಲವೇ ಎಂಬುದನ್ನು ಪರಿಶೀಲಿಸಲು ವಿಯೆಟ್ನಾಂನ ಹಳ್ಳಿಯೊಂದಕ್ಕೆ ತೆರಳಿದರು. ಯೂಟ್ಯೂಬರ್ ಆ ಒಂದು ರಾತ್ರಿ ಥಾಯ್ ಜೊತೆಗೆ ಉಳಿದುಕೊಂಡರು. ಈ ಸಂದರ್ಭದಲ್ಲಿ ಅವರು ಇಡೀ ರಾತ್ರಿ ನಿದ್ದೆ ಮಾಡಿಲ್ಲ ಎಂಬುದು ತಿಳಿದುಬಂತು.ವೈದ್ಯಕೀಯ ಪರೀಕ್ಷೆಯಲ್ಲಿಯೂ ಈ ವ್ಯಕ್ತಿ ಶಾಶ್ವತ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದ್ದರೂ ಈ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲವೆನ್ನುವುದು ವಿಶೇಷ.
ವಿಯೆಟ್ನಾಂ ಯುದ್ಧದ ಸಮಯದಲ್ಲಿ ಎನ್ಗೊಕ್ ಈ ಸಮಸ್ಯೆಯನ್ನು ಅನುಭವಿಸಲು ಶುರು ಮಾಡಿದರು ಎಂದು ತಿಳಿದು ಬಂದಿದೆ.ಕೆಲವು ಊಹಾಪೋಹಗಳ ಆಧಾರದ ಪ್ರಕಾರ1955 ರಿಂದ 1975 ರ ನಡುವೆ ಉಂಟಾದ ಯುದ್ಧ ಎನ್ಗೊಕ್ನ ನಿದ್ರೆಯ ಕೊರತೆಯ ಹಿಂದಿನ ಪ್ರಮುಖ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂತರ್ಜಾಲದಲ್ಲಿ ಜನರು ಎನ್ಗೊಕ್ನ ಕಥೆಯನ್ನು ದುರಂತವೆಂದು ಜನ ಹೇಳುತ್ತಿದ್ದಾರೆ.
ಈ ಹಿಂದೆಯೂ ಸೌದಿಯ 70 ವರ್ಷದ ವೃದ್ಧರೊಬ್ಬರಿಗೆ ಕಳೆದ 70 ವರ್ಷಗಳಿಂದ ನಿದ್ರೆ ಎಂದರೆ ಏನು ಎಂಬುದೇ ತಿಳಿಯದಾಗಿದೆ.ಈತನ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈದ್ಯರು ಕೂಡ ಈತನ ನಿದ್ರಾ ಹೀನತೆಗೆ ಕಾರಣ ಹುಡುಕಲು ಪರದಾಡುತ್ತಿದ್ದಾರೆ. 70 ರ ಇಳಿ ವಯಸ್ಸಿನ ವೃದ್ಧನಿಗೆ ನಿದ್ರೆ ಬರುವಂತೆ ಮಾಡಲು ವೈದ್ಯರು ಇಲ್ಲ ಸಲ್ಲದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಯಾವುದೇ ಫಲ ಸಿಕ್ಕಿಲ್ಲ.ಈತನ ವಿಚಾರ ಕೂಡ ಅನೇಕರಲ್ಲಿ ಧಿಗ್ಬ್ರಮೆ ಹುಟ್ಟಿಸಿದೆ.