ನ್ಯೂಸ್ ನಾಟೌಟ್ : ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಚಿತ್ರಕೂಟ ಜಲಾಪತ ಭೋರ್ಗೆರೆಯುತ್ತಿದೆ. ಇದೇ ಜಲಪಾತದಲ್ಲಿ 21ರ ಹರೆಯದ ಯುವತಿ ಹಾರಿದ್ದಾಳೆ. ಪ್ರವಾಸಿಗರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡುತ್ತಿದ್ದಾರೆ. ಆದರೆ ಯುವತಿ ಮಾತ್ರ ಯಾವುದನ್ನೂ ಕೇಳಿಸುತ್ತಿಲ್ಲ. ಒಂದೆರೆಡು ನಿಮಿಷ ಹಾಗೇ ನಿಂತು ಒಂದೇ ಸಮನೆ ಭೋರ್ಗರೆಯುತ್ತಿರುವ ಜಲಪಾತಕ್ಕೆ ಹಾರಿದ್ದ
ಜಲಪಾತದ ನೀರಿನಲ್ಲಿ ಮುಳುಗಿದ ಯುವತಿ ಮೇಲಿಂದ ಕೆಳಗ್ಗೆ ಬಿದ್ದಿದ್ದಾಳೆ. ಈ ಭೀಕರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಯುವತಿ ಮರಳಿ ಮನೆ ಸೇರಿದ್ದಾಳೆ. ಚತ್ತೀಸಘಡದ ಚಿತ್ರಕೂಟ ಜಲಪಾತದಲ್ಲಿ ಈ ಘಟನೆ ನಡೆದಿದೆ.
21 ವರ್ಷದ ಯುವತಿ ಸರಸ್ವತಿ ಮೌರ್ಯ ಮನೆಯಲ್ಲಿ ಪೋಷಕರ ಜೊತೆ ಜಗಳ ಮಾಡಿದ್ದಾಳೆ. ಕಾಲೇಜು ವ್ಯಾಸಾಂಗ ಮಾಡುತ್ತಿರುವ ಸರಸ್ವತಿ ಅತೀಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಪದೇ ಪದೇ ಎಚ್ಚರಿಕೆ ನೀಡಿದ ಪೋಷಕರು, ಬಳಿಕ ಮೊಬೈಲ್ ಕಸಿದುಕೊಂಡಿದ್ದಾರೆ. ಇದಕ್ಕೆ ಯುವತಿ ಪೋಷಕರ ಜತೆ ಜಗಳ ಮಾಡಿದ್ದಾಳೆ. ಬಳಿಕ ಬಸ್ತಾರ್ ಜಿಲ್ಲೆಯಲ್ಲಿರುವ ಚಿತ್ರಕೂಟ ಜಲಪಾತಕ್ಕೆ ತೆರಳಿದ್ದಾಳೆ.
ಜಲಪಾತ ಧುಮ್ಮಿಕ್ಕುವ ಅಂಚಿನಲ್ಲಿ ಯುವತಿ ಕೆಲ ಕ್ಷಣಗಳ ಕಾಲ ನಿಂತುಕೊಂಡಿದ್ದಾಳೆ. ಬಳಿಕ ಒಂದೇ ಸಮನೆ ಜಲಪಾತಕ್ಕೆ ಹಾರಿದ್ದಾಳೆ. ಎರಡು ಹಂತದಲ್ಲಿರುವ ಜಲಪಾತ ಮೊದಲ ಭಾಗದ ನೀರಿನಲ್ಲಿ ಕೊಚ್ಚಿ ಹೋದ ಯುವತಿ, ಬಳಿಕ ಅತ್ಯಂತ ಕೆಳಕ್ಕೆ ಬಿದ್ದಿದ್ದಾಳೆ. ಭಾರಿ ಪ್ರಮಾಣದ ನೀರು ಹಾಗೂ ಹರಿವಿನಲ್ಲಿ ಯುವತಿ ಕೊಚ್ಚಿ ಹೋಗಿದ್ದಾಳೆ. ಈ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಜಲಪಾತಕ್ಕೆ ಹಾರಿದ ಯುವತಿ ನೀರಿನ ರಭಸ ಹಾಗೂ ಆಳಕ್ಕೆ ಬಿದ್ದಿದ್ದಾಳೆ. ಆದರೆ ಹಾರಿದ ಕ್ಷಣದಿಂದ ಯುವತಿ ಈಜಲು ಆರಂಭಿಸಿದ್ದಾಳೆ. ಬಳಿಕ ಈಜಿ ನದಿ ಬದಿಗೆ ಬಂದಿದ್ದಾಳೆ. ಇದೇ ವೇಳೆ ಸ್ಥಳೀಯರ ನೆರವಿನಿಂದ ಯುವತಿ ಬದುಕಿ ಬಂದಿದ್ದಾಳೆ. ಯುವತಿಯ ಕೈ, ಕಾಲು, ದೇಹದಲ್ಲಿ ಗಾಯಗಳಾಗಿದೆ. ಯುವತಿಯನ್ನಸ್ಥಳೀಯರು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.