ನ್ಯೂಸ್ ನಾಟೌಟ್ : ಪ್ರಾಕೃತಿಕ ವಿಕೋಪ ಅಥವಾ ಪ್ರವಾಹಗಳು ಎದುರಾದಾಗ ಎಷ್ಟೋ ಕುಟುಂಬಗಳು ದಿಕ್ಕು ಪಾಲಾಗಿದ್ದು, ಮನಸ್ಸು ಕರಗುವಂತಹ ಘಟನೆಗಳು ನಡೆದ ಉದಾಹರಣೆಗಳಿವೆ.ಆದರೆ ಪ್ರವಾಹದ ಕಾರಣಕ್ಕೆ ಹಲವು ವರ್ಷಗಳ ಬಳಿಕ ತಾಯಿ-ಮಗ ಒಂದಾದ ಅಪರೂಪಗಳಲ್ಲಿ ಅಪರೂಪವೆಂಬಂತಹ ಘಟನೆಯೊಂದು ನಡೆದಿದೆ.
ತಾಯಿ ಹಾಗೂ ಮಗ ಬರೋಬ್ಬರಿ 35 ವರ್ಷಗಳ ಬಳಿಕ ಮತ್ತೆ ಪರಸ್ಪರ ನೋಡುವಂತಾಗಲು ಪ್ರವಾಹವೇ ಪ್ರಮುಖ ಕಾರಣವಾಗಿದ್ದು ವಿಶೇಷವೆಂಬಂತಿದೆ. ಹೌದು, ಪಂಜಾಬ್ನ ಪಟಿಯಾಲಾದಲ್ಲಿ ಈ ಪ್ರಕರಣ ನಡೆದಿದ್ದು, ಜಗಜಿತ್ ಸಿಂಗ್ ಎಂಬ 37 ವರ್ಷದ ವ್ಯಕ್ತಿ 35 ವರ್ಷಗಳ ಬಳಿಕ ತಾಯಿಯನ್ನು ನೋಡುವಂತಹ ಭಾಗ್ಯ ಒದಗಿ ಬಂದಿದೆ.
ಜಗಜಿತ್ ಸಿಂಗ್ ಅವರಿಗೆ 2 ವರ್ಷವಿದ್ದಾಗ ತಂದೆ ತೀರಿಹೋಗಿದ್ದರು.ಈ ಹಿನ್ನಲೆಯಲ್ಲಿ ತಾಯಿ ಎರಡನೇ ಮದುವೆಯಾಗಿದ್ದರು. ಆ ಬಳಿಕ ಜಗಜಿತ್ ಸಿಂಗ್ ಅವರ ಅಜ್ಜ-ಅಜ್ಜಿ ಆತನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬೆಳೆಸಿದ್ದು, ನಿನ್ನ ತಂದೆ ತಾಯಿ ಅಪಘಾತದಲ್ಲಿ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದರು.ಇದನ್ನೇ ನಂಬಿಕೊಂಡಿದ್ದ ಬಾಲಕ ಕಳೆದ 37 ವರ್ಷಗಳಿಂದ ಜೀವನ ನಡೆಸುತ್ತಿದ್ದ..!
ಆದರೆ ಇತ್ತೀಚೆಗೆಷ್ಟೇ ಪಂಜಾಬ್ನ ಪಟಿಯಾಲದ ಪ್ರವಾಹಪೀಡಿತ ಪ್ರದೇಶವೊಂದಕ್ಕೆ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಗಜಿತ್ ಆಗಮಿಸಿದ್ದ.೨ ವರ್ಷ ಬಾಲಕನಾಗಿದ್ದಾಗ ಪಟಿಯಾಲದ ಬೊಹರ್ಪುರ ಗ್ರಾಮದಲ್ಲಿ ತಾಯಿಯ ತಂದೆ-ತಾಯಿ ಇದ್ದರು ಎಂದು ಸಂಬಂಧಿಕರೊಬ್ಬರು ಹೇಳುತ್ತಿದ್ದುದನ್ನು ನೆನಪಿಸಿಕೊಂಡ ಜಗಜಿತ್ ಆ ಗ್ರಾಮವನ್ನು ಅರಸಿಕೊಂಡು ಹೋಗಿ ವಿಚಾರಿಸಿದ್ದ ಎಂದು ತಿಳಿದು ಬಂದಿದೆ.
ಬಳಿಕ ತಾನು ಹುಡುಕುತ್ತಿದ್ದ ಮನೆಯ ವಿಳಾಸ ಸಿಕ್ಕಾಗ ಅಲ್ಲಿ ಮಂಚದ ಮೇಲೆ ಮಲಗಿದ್ದ ವೃದ್ಧೆಯೊಬ್ಬಳ ಬಳಿ ವಿಚಾರಿಸಿದ ಜಗಜಿತ್.ಕೊನೆಗೂ ಆಕೆಯೇ ತನ್ನ ತಾಯಿಯ ತಾಯಿ ಎಂಬುದು ಗೊತ್ತಾಗಿದೆ. ತನ್ನ ತಾಯಿಯ ತಂದೆ-ತಾಯಿ ಜೀವಂತ ಇದ್ದರು, ಆದರೆ ವೈಮನಸ್ಯದ ಕಾರಣಕ್ಕೆ ನಾವು ಮಾತಾಡುತ್ತಿಲ್ಲ ಎಂದು ಅಜ್ಜ-ಅಜ್ಜಿ ಹೇಳುತ್ತಿದ್ದುದನ್ನು ಜಗಜಿತ್ ಹೇಳಿಕೊಂಡಿದ್ದ.
ಸಂಬಂಧಿಯೊಬ್ಬರು ಬೊಹರ್ಪುರ ಎಂಬ ಗ್ರಾಮದ ಕುರಿತು ಹೇಳುತ್ತಿದ್ದದ್ದು ನೆನಪಿದ್ದರಿಂದ ಹುಡುಕಿಕೊಂಡು ಬಂದೆ ಎಂದ ಜಗಜಿತ್ಗೆ ಕೊನೆಗೂ 35 ವರ್ಷಗಳ ಬಳಿಕ ತಾಯಿಯ ದರ್ಶನವಾಗಿದೆ. ಜಗಜಿತ್ ತನ್ನ ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.