ನ್ಯೂಸ್ ನಾಟೌಟ್: ಹಾಸನ ನಗರದ ವೈದ್ಯಕೀಯ ಬೋಧಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್ನಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿ ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ಆಸ್ಪತ್ರೆಯ ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ ಬ್ಲಾಸ್ಟ್ ಆಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದ ಕೆಲಕಾಲ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಸಿಬ್ಬಂದಿ ಬೇರೆಡೆಗೆ ಶಿಫ್ಟ್ ಮಾಡಿದ್ದಾರೆ. ಆ ಮೂಲಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲ 24 ನವಜಾತ ಶಿಶುಗಳಉ ಆರೋಗ್ಯವಾಗಿದ್ದಾರೆ ಎಂದು ಮಕ್ಕಳ ಐಸಿಯು ವಾರ್ಡ್ ಮುಖ್ಯಸ್ಥ ಡಾ. ಕುಮಾರ್ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಐಸಿಯು ಕೋಣೆಯೊಳೆಗೆ ಹೊಗೆ ತುಂಬಿಕೊಂಡಿದೆ. ತಕ್ಷಣ ಆಸ್ಪತ್ರೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಕಿಟಕಿ ಗಾಜುಗಳನ್ನು ಒಡೆದು ಮಕ್ಕಳನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಹಿಮ್ಸ್ನ ನಿರ್ದೇಶಕ ರವಿಕುಮಾರ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.