ನ್ಯೂಸ್ ನಾಟೌಟ್: ಯುವತಿಯೊಬ್ಬಳು ತನ್ನ ತಂದೆಯನ್ನೇ ಮದುವೆಯಾಗಿರುವ ವಿಚಿತ್ರ ಪ್ರಕರಣವೊಂದು ಪಾಕಿಸ್ತಾನದಲ್ಲಿ ನಡೆದಿದೆ. ತನ್ನ ತಂದೆಗೆ ಆ ಯುವತಿ ಈಗ ನಾಲ್ಕನೇ ಪತ್ನಿಯಾಗಿದ್ದಾಳೆ ಎನ್ನುವುದು ಮತ್ತೊಂದು ವಿಪರ್ಯಾಸ.
ಮಗಳು ತನ್ನ ತಂದೆಯೊಂದಿಗೆ ಮದುವೆಯಾದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಅವರ ಮದುವೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಈ ವೀಡಿಯೋದ ನಿಖರವಾದ ಸ್ಥಳ ಮತ್ತು ರೆಕಾರ್ಡಿಂಗ್ ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಕೆಲವು ನೆಟ್ಟಿಗರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಯುವತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.
ವೀಡಿಯೋದ ಸತ್ಯಾಸತ್ಯತೆ ಮತ್ತು ವಿವರಗಳನ್ನು ಪರಿಶೀಲಿಸಲಾಗಿಲ್ಲ. ಇದು ಊಹಾಪೋಹ ಇರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಮತ್ತೊಂದು ಕಡೆ ಈ ವಿವಾಹವು ವಿವಾದದ ಅಲೆಯನ್ನು ಹುಟ್ಟುಹಾಕಿದೆ.
ನನ್ನ ಪೋಷಕರಿಗೆ ನಾನು ಎರಡನೇ ಮಗಳು. ನನ್ನ ಬದುಕಿಗೆ ಪರಿಹಾರವೊಂದನ್ನು ಹುಡುಕುತ್ತಿದ್ದೆ. ಆಗ, ನನ್ನ ತಂದೆಗೇ ನಾನೇಕೆ 4ನೇ ಪತ್ನಿಯಾಗಬಾರದು ಎಂದು ಆಲೋಚನೆ ಹೊಳೆಯಿತು ಎಂದು ವೀಡಿಯೋವೊಂದರಲ್ಲಿ ಯುವತಿ ವಿವರಿಸುತ್ತಿದ್ದಾಳೆ. ಈ ವೀಡಿಯೋವನ್ನು ಹಮೀರ್ ದೇಸಾಯಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.