ನ್ಯೂಸ್ ನಾಟೌಟ್ : ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಮಾದಕ ವಸ್ತು ಮಾರಾಟ ಜಾಲವೊಂದನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು ಮಾಲು ಹಾಗೂ ವಾಹನ ಸಹಿತ ಐವರನ್ನು ವಶಕ್ಕೆ ಪಡೆದಿದ್ದಾರೆ.
ಸುಂಟಿಕೊಪ್ಪ ಚೆಸ್ಕಾಂ ಬಳಿಯ ನಿವಾಸಿಗಳಾದ ರಫೀಕ್ (40),ನಯನ್ (25),ಅಭಿಷೇಕ್ (20),ಮೊಹಮ್ಮದ್ ಮುಕ್ರಮ್ (40) ಎಂಬವರನ್ನು ಬಂಧಿಸಲಾಗಿದೆ.ಅವರ ಬಳಿಯಿಂದ 1 ಕೆ.ಜಿ.65 ಗ್ರಾಂ ಗಾಂಜಾ, 2.5 ಗ್ರಾಂ ನಿಷೇಧಿತ ಮಾದಕ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸುಂಟಿಕೊಪ್ಪದ ಮಾರುಕಟ್ಟೆ ರಸ್ತೆ ಬಳಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಂದರ್ಭ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು, ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸುಂದರ್ ರಾಜ್, ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ.ಮಹೇಶ್ ನೇತೃತ್ವದ ತಂಡದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಎಸ್.ಐ.ಸ್ವಾಮಿ ಸಿಬ್ಬಂದಿಗಳಾದ ಮುಖ್ಯಪೇದೆ ಎಂ.ವಿ.ಸತೀಶ್, ಜಗದೀಶ್, ಪ್ರವೀಣ್, ಸಂಪತ್, ನಿಶಾಂತ್, ಸತೀಶ್ ಕುಮಾರ್, ಇಳಗೆರೆ, ಅಭಿಲಾಷ್, ಪ್ರಶಾಂತ್ ಕುಮಾರ್,ಉದಯಕುಮಾರ್, ಸೌಮ್ಯ, ಸಂತೋಷ್, ಸತೀಶ್ ಹಿರಿಗೇರಿ ಸೇರಿದಂತೆ ಮತ್ತಿತರರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.