ನ್ಯೂಸ್ ನಾಟೌಟ್ : ಚರಂಡಿ ವ್ಯವಸ್ಥೆಯಿದ್ದರೂ ನಿರ್ವಹಣೆ ಕೊರತೆಯಿಂದ ಸುಳ್ಯ ಪೇಟೆಯಲ್ಲಿ ಮಳೆ ನೀರು ಹೆದ್ದಾರಿಯಲ್ಲೇ ಹರಿಯುವ ಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಸಾಯಂಕಾಲ ಸುರಿದ ಮಳೆಗೆ ಸರಿಯಾಗಿ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಭಾರಿ ತೊಂದರೆಯಾಗಿದೆ.
ಸುಳ್ಯ ನಗರದ ಮುಖ್ಯ ರಸ್ತೆಯ ದ್ವಾರಕ ಹೋಟೆಲ್ ಬಳಿಯಿಂದ ಜಟ್ಟಿಪಳ್ಳ ದವರೆಗೆ ಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆಯಿಂದ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಇದರಿಂದ ಫುಟ್ಪಾತ್ನಲ್ಲಿ ಸಂಚರಿಸುವ ಪಾದಚಾರಿಗಳ ಮೇಲೆ ವಾಹನ ಹಾದು ಹೋಗುವಾಗ ಕೆಸರು ನೀರಿನ ಸಿಂಚನವಾಗುತ್ತಿದೆ. ನೀರು ಸರಿಯಾಗಿ ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲೇ ಹೋಗುತ್ತಿದೆ. ಆದಷ್ಟು ಬೇಗ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮವಹಿಸಿ ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯಲು ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.