ನ್ಯೂಸ್ ನಾಟೌಟ್ :ಸ್ವಾಮಿ ನಿತ್ಯಾನಂದನ ವಿರುದ್ಧ ಭಾರತದಲ್ಲಿ ಹಲವು ಕೇಸ್ ದಾಖಲಾಗಿವೆ.ಬೆಂಗಳೂರಿನ ಬಿಡದಿಯಲ್ಲಿ ಆಶ್ರಮ ಹೊಂದಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ‘ವೃತ್ತಾಂತ’ಗಳು ೨೦೧೦ರಲ್ಲಿ ಮೊಟ್ಟಮೊದಲ ಬಾರಿಗೆ ಹೊರಬಂದಿದ್ದವು.ನಿತ್ಯಾನಂದ ಕೆಲ ದಿನಗಳಲ್ಲೇ ತಾನು ಕೈಲಾಸ ಎನ್ನುವ ದೇಶವನ್ನು ರಚನೆ ಮಾಡಿದ್ದು,ನಾನೇ ಅಧ್ಯಕ್ಷ ಎಂದು ಘೋಷಣೆ ಮಾಡಿದ್ದರು.ಇದೀಗ ಈ ದೇಶಕ್ಕೆ ರಂಜಿತಾ ಪ್ರಧಾನಿಯಾಗಿ ನೇಮಕವಾಗಿದ್ದಾರೆ..!
ಅಂದು ಖಾಸಗಿ ಟಿವಿಯಲ್ಲಿ ನಟಿ ರಂಜಿತಾ ಜೊತೆಗಿನ ನಿತ್ಯಾನಂದನ ಸೆಕ್ಸ್ ವಿಡಿಯೋಗಳು ಪ್ರಸಾರವಾಗಿದ್ದವು. ಆ ಬಳಿಕ ಈತನ ಒಂದೊಂದೇ ಅನಾಚಾರಗಳು ಬೆಳಕಿಗೆ ಬಂದಿದ್ದವು.ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ, ಅಪಹರಣ ಕೇಸ್ಗಳಲ್ಲಿ ಈತನ ವಿರುದ್ಧ ಜಾಮೀನುರಹಿತ ವಾರಂಟ್ಗಳು ಜಾರಿಯಾಗಿದ್ದವು.ಇದರ ನಡುವೆ 2019ರಲ್ಲಿ ಭಾರತದಿಂದ ಓಡಿಹೋಗಿದ್ದ ನಿತ್ಯಾನಂದ ಕೆಲ ದಿನಗಳಲ್ಲೇ ತಾನು ಕೈಲಾಸ ಎನ್ನುವ ದೇಶವನ್ನು ರಚನೆ ಮಾಡಿದ್ದು, ಅದಕ್ಕೀಗ ನಟಿ ರಂಜಿತಾ ಪ್ರಧಾನಿಯಾಗಿದ್ದಾರೆ.
ಈಕ್ವಡಾರ್ನ ಕರಾವಳಿಯಲ್ಲಿರುವ ದ್ವೀಪವನ್ನು ನಿತ್ಯಾನಂದ ಖರೀದಿ ಮಾಡಿದ್ದು ಇಲ್ಲಿಯವರೆಗೂ ಕೈಲಾಸ ಎನ್ನುವ ದೇಶ ಹೇಗಿದೆ, ಅದರ ಇತಿಹಾಸವೇನು, ಅದರ ಸಂಪ್ರದಾಯವೇನು, ಕರೆನ್ಸಿ, ಸಂವಿಧಾನ, ಸಂಸತ್ತು, ಸುಪ್ರೀಂ ಕೋರ್ಟ್ ಇವೆಲ್ಲ ಇದೆಯೇ ಎನ್ನುವುದರ ಬಗ್ಗೆ ಅನುಮಾನಗಳಿದ್ದರೂ ಇದರ ನಡುವೆ ತಮ್ಮ ದೇಶದ ಪ್ರಧಾನಿಯನ್ನು ಘೋಷಣೆ ಮಾಡಲಾಗಿದೆ.
ಇತ್ತೀಚೆಗೆ ರಂಜಿತಾ ಅವರನ್ನು ಕೈಲಾಸದ ಪ್ರಧಾನಿಯಾಗಿ ನಿತ್ಯಾನಂದ ಘೋಷಣೆ ಮಾಡಿದ್ದಾರೆ ಎಂದು ತಮಿಳಿನ ಪ್ರಮುಖ ಮ್ಯಾಗಝೀನ್ ವರದಿ ಮಾಡಿದೆ.ರಂಜಿತಾ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆರಿಯರ್ ಉತ್ತುಂಗದಲ್ಲಿರುವಾಗಲೇ ನಿತ್ಯಾನಂದನ ಜೊತೆ ಸೇರಿಕೊಂಡಿದ್ದಲ್ಲದೆ, ಆತನ ನೆಚ್ಚಿನ ಶಿಷ್ಯೆ ಕೂಡ ಆಗಿದ್ದರು.