ನ್ಯೂಸ್ ನಾಟೌಟ್: ಕಳೆದ ನಾಲ್ಕು ದಿನದ ಹಿಂದೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದ ಕನಕಮಜಲು ಬುಡ್ಲೆಗುತ್ತು ಯುರೇಶ್ ಅವರ ಮನೆಗೆ ಜು.20 ರಂದು ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿದರು.
ಘಟನೆಯ ವಿವರ ಪಡೆದ ಬಳಿಕ ಜತೆಗಿದ್ದ ಪೊಲೀಸ್ ಅಧಿಕಾರಿಗಳಿಗೆ ಶೀಘ್ರವೇ ಕಳ್ಳರನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಇಂಥ ಕೃತ್ಯಗಳಿಗೆ ಅವಕಾಶ ನೀಡದಂತೆ ಪೊಲೀಸರು ಬೀಟ್ ವ್ಯವಸ್ಥೆಗಳನ್ನು ಹೆಚ್ಚಿಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ಸುರೇಶ್ ಎಂ.ಎಚ್., ಕೀರ್ತನ್ ಕೊಡಪಾಲ, ದಿನೇಶ್ ಮಡ್ತಿಲ, ಶಿವರಾಮ್ ಮೊದಲಾದವರಿದ್ದರು.