ನ್ಯೂಸ್ ನಾಟೌಟ್: ದಿನನಿತ್ಯದ ಬಳಕೆಯ ತರಕಾರಿ ಟೊಮೆಟೋ ಹಣ್ಣಿಗೆ ಈಗ ಚಿನ್ನದ ದರ ಬಂದಿದೆ. ಈ ಕಾರಣದಿಂದ ಟೊಮೆಟೋ ಕಳ್ಳತನದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು, ಇದೀಗ ಮಲೆನಾಡಿನಲ್ಲೂ ಟೊಮೆಟೋ ಕಳ್ಳರ ಹಾವಳಿ ಹೆಚ್ಚಾಗಿದೆ ಅನ್ನುವಂತಹ ಸುದ್ದಿಗಳು ಹರಡಿದಿದೆ.
ಚಿಕ್ಕಮಗಳೂರ: ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮೆಟೋ ಇದ್ದ ಎರಡ ಟ್ರೇ ಕಳ್ಳತನವಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಜಿಲ್ಲೆಯ ಚಿಕ್ಕಮಗಳೂರಿನ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೋ ಕಳ್ಳತನವಾಗಿದೆ. ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೋ ಇರಲಿಲ್ಲ.
ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಠಾಣೆಯ ಕಾಂಪೌಂಡ್ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಯಲ್ಲಿ ಟಮೋಟೋ ಕಳ್ಳತನವಾಗಿದ್ದು ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ದೂಡುತ್ತಿದ್ದ ನದೀಂ ಅವರು ಅತಂತ್ರಕ್ಕೀಡಾಗಿದ್ದಾರೆ. ಆದರೆ, ನದೀಂ ಅವರ ತರಾಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಹೀಗೆ ಟಾರ್ಪಲ್ ಕಟ್ಟಿ ಹೋದಾಗ ಬರುವಷ್ಟರಲ್ಲಿ ರಾತ್ರೋರಾತ್ರಿ ಕಳ್ಳತನವಾಗಿದ್ದು ನದೀಂ ಟೊಮೆಟೋ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.