ನ್ಯೂಸ್ ನಾಟೌಟ್ :ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿದರು. ಈ ವೇಳೆ ಸ್ಥಳೀಯರು ದೇವಸ್ಥಾನದ ಹೊಳೆ ಬದಿಯ ತಡೆಗೂಡೆಯ ನಿರ್ಮಾಣಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಬಿ.ಸದಾಶಿವ,ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ , ಸಂಪಾಜೆ ಹೋಬಳಿ ಉಪ ತಹಶೀಲ್ದಾರ್ ಹೆಚ್ .ಹೆಚ್ ವೆಂಕಟಾಚಲ, , ನಿವೃತ್ತ ಕಂದಾಯ ಪರೀಕ್ಷಕ ಪ್ರಭಾರ, ಉಪತಹಶೀಲಾರ್ ಎಂ. ಏ ಸದಾನಂದ , ಎಂ.ಸಿ ಮನೋಹರ ಜಿಲ್ಲಾ ಕಾಂಗ್ರೆಸ್ ಸದಸ್ಯ , ಸಂಪಾಜೆ ಕಂದಾಯ ಪರಿವೀಕ್ಷಕರು ಬಿ. ಜಿ ವೆಂಕಟೇಶ್, ಯತೀಶ್ ಉಳ್ಳಾಲ ಹಿರಿಯ ಸಹಾಯ ಉಪಯುಕ್ತರು ಉಪವಿಭಾಗ ಮಡಿಕೇರಿ ಯತೀಶ್ ಉಳ್ಳಾಲ , ಶೋಭಾ ರಾಣಿ, ಸಂಪಾಜೆ ಗ್ರಾ.ಪಂ.ಅಧ್ಯಕ್ಷರು ನಿರ್ಮಲಾ ಭಾರತ್, ಉಪಾಧ್ಯಕ್ಷರು ಜಗದೀಶ್ ಪರಮಲೆ, ಕಾರ್ಯದರ್ಶಿ ನವೀನ್ ಕುಮಾರ್ ಬಿ.ಎಂ, ಸೀತಾರಾಂ ಕೆ. ಮಾಜಿ ಅಧ್ಯಕ್ಷರು ಯುವ ಕಾಂಗ್ರೆಸ್ ಕೊಡಗು ಹನೀಫ್ ಎಸ್ . ಪಿ, ಕೊಡಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯಿದಿನ್ ಕುಂಜಿ, ನಾಪೋಕ್ಲು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ಕರಿಕೆ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎನ್ ಬಾಲಚಂದ್ರ ನಾಯರ್ ,ಜಯ ಚೆದ್ಕಾರ್ , ಗ್ರಾಮಸ್ಥರು ,ಮೊದಲಾದವರು ಉಪಸ್ಥಿತರಿದ್ದರು.
ನಂತರ ಕೊಡಗು-ಸಂಪಾಜೆ ಗ್ರಾಮ ಪಂಚಾಯತ್ನ ಮಂಗಳಪಾರೆಯ ಕೂವೆಕ್ಕಾಡು ನೀರಿನ ಸರಬರಾಜು ಟ್ಯಾಂಕ್ ಉದ್ಘಾಟನೆಯನ್ನು ಮುಖ್ಯ ಮಂತ್ರಿಯ ಕಾನೂನು ಸಲಹೆಗಾರ, ವಿರಾಜಪೇಟೆ ವಿಧಾನಸಭಾ ಶಾಸಕ ಎ.ಎಸ್. ಪೊನ್ನಣ್ಣ ನೇರವೇರಿಸಿದರು.ಬಳಿಕ ಶಾಸಕರು ಮನೆಗಳಿಗೆ ನೀರು ಸರಿಯಾಗಿ ಬರುತ್ತಿದೆಯೇ ಎಂದು ಪರಿಶೀಲಿಸಿದರು.ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.