ನ್ಯೂಸ್ ನಾಟೌಟ್: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲು ಚೆಂಬುವಿನಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ನ್ನು ಉದ್ಘಾಟಿಸಲಾಯಿತು. ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.
Menda Foundation ಮತ್ತು S & P Global Foundation ನ ಪ್ರಾಯೋಜಕತ್ವದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಮತ್ತು ಚೆಂಬು ಗ್ರಾಮ ಪಂಚಾಯಿತಿ ಯ ಸಹಕಾರದೊಂದಿಗೆ ಶಾಲೆಯಲ್ಲಿ “ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್” ಅನುಷ್ಠಾನ ಮಾಡಲಾಗಿದೆ.
ಬಳಿಕ ಶಾಸಕರು ಈ ಯೋಜನೆಯನ್ನು ಅನುಷ್ಠಾನ ಮಾಡಿರುವ ಸಂಸ್ಥೆಗಳನ್ನು ಮತ್ತು ಗ್ರಾಮ ಪಂಚಾಯಿತಿಯನ್ನು ಗೌರವಿಸಿದರು.ಈ ವೇಳೆ ಶಾಲಾ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದ ಶ್ರೀ ಯತೀಶ ಕುಂದಲ್ಪಾಡಿ ಇವರನ್ನು ಗೌರವಿಸಲಾಯಿತು. ಈ ಸಂದರ್ಭ ಶಾಸಕರನ್ನು ಶಾಲಾ ಎಸ್ ಡಿ ಎಂ ಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚೆಂಬು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ.ಎ, ಸದಸ್ಯರುಗಳಾದ ಶ್ರೀ ರಮೇಶ ಹುಲ್ಲುಬೆಂಕಿ, ಶ್ರೀ ವಸಂತ ಎನ್.ಟಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ದೊಡ್ಡೇಗೌಡ್ರು , ಎಸ್.ಡಿ.ಎಂ. ಸಿ ಅಧ್ಯಕ್ಷರು ಶ್ರೀ ಲಕ್ಷ್ಮಣ ಜಿ ಆರ್, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಶ್ರೀ ಆಶಿಕ್ ಬಿ.ಎ ಉಪಸ್ಥಿತರಿದ್ದರು.
ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು, ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಸೆಲ್ಕೋ ಸೋಲಾರ್ ಸಿಬ್ಬಂದಿ, ಪೋಷಕರು, ಊರಿನವರು, ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸೋಮಣ್ಣ ಕೆ ಆರ್ ಸ್ವಾಗತಿಸಿ, ವಿಕ್ರಾಂತ ಎಂ.ಬಿ. ನಿರೂಪಿಸಿ ವಂದಿಸಿದರು.