ನ್ಯೂಸ್ ನಾಟೌಟ್ : ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ತನ್ನ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ಸಕಲ ರೀತಿಯಲ್ಲೂ ಅಂತಿಮ ಸಿದ್ದತೆ ನಡೆಸಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ತಯಾರಿ ನಡೆದಿದೆ.
ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿದರು ಎನ್ನಲಾಗಿದೆ. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.
ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಎಲ್ ಅಂಡ್ ಟಿ ಕೂಡ ಕೈ ಜೋಡಿಸಿದೆ.
ಇದೇ ಶುಕ್ರವಾರ ಅಂದರೆ ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಇಸ್ರೋ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಿದ್ದು, ಈ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಮತ್ತು ನಾಡಿನ ಜನತೆ ಹುತೂಹಲದಿಂದ ಈ ಯಾನದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ.