ನ್ಯೂಸ್ ನಾಟೌಟ್ : ಇಂದು ವೈದ್ಯರ ದಿನ.ದೇಶದೆಲ್ಲೆಡೆ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ವೈದ್ಯರಿಲ್ಲದ ಜಗತ್ತನ್ನು ಊಹಿಸೋದು ಕೂಡ ಕಷ್ಟ.ಎಷ್ಟೋ ಜನರ ಉಳಿಸಿ ಅವರ ಪಾಲಿಗೆ ವೈದ್ಯರು ದೇವರೇ ಆಗಿದ್ದಾರೆ.ಇದೀಗ ಇಲ್ಲೊಂದು ಕಡೆ ವೈದ್ಯರು ಅವೆಲ್ಲದಕ್ಕೂ ವಿಭಿನ್ನವಾಗಿ ನಿಲ್ಲುತ್ತಾರೆ. ಅಪಘಾತಕ್ಕೀಡಾಗಿ ಸಾಯುವ ಹಂತದಲ್ಲಿದ್ದ ಬಡ ಮಹಿಳೆಯ ಬಳಿ ಹಣ ಪಡೆಯದೆ 24 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ..!
ಅಂದ ಹಾಗೆ ಈ ಘಟನೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಹಿಂಡಿಗನಾಳ ಗ್ರಾಮದ ಪ್ರಿಯ ಎಂಬುವರು 2 ವರ್ಷದ ಹಿಂದಷ್ಟೇ ಮದುವೆ ಆಗಿದ್ದರು.ಹಿಂಡಿಗನಾಳ ಗ್ರಾಮದಲ್ಲಿ ಸಂಭವಿಸಿದ ಅಪಘಾತದಿಂದ ಮೆದುಳು ಹೊರಗಡೆ ಬಂದು ಸಾಯುವ ಸ್ಥಿತಿಯಲ್ಲಿ ಪ್ರಿಯಾ ನರಳಾಡುತ್ತಿದ್ದರು.ಇಂತಹ ಸಂದರ್ಭದಲ್ಲಿ ಬಡ ರೋಗಿಯನ್ನು ಹಣದ ಮುಖ ನೋಡದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟು ಕಾಪಾಡಿದ್ದಾರೆ..!
ಮಹಿಳೆಯಿದ್ದ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಲೆಯ ಮೆದುಳು ಹೊರಬಂದು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ಪ್ರಿಯಾಗೆ ವೈದ್ಯರು ಮಾನವೀಯತೆ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹಣ ಪಡೆಯದೆ 24 ಗಂಟೆಯಲ್ಲಿ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.ವೈದ್ಯರ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ಪ್ರಿಯಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.