ನ್ಯೂಸ್ ನಾಟೌಟ್ : ಪೆರುವಾಜೆಯಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ಪೊಲೀಸ್ ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಮೋದರ ನಾಯ್ಕ ಪೆಲತ್ತಡ್ಕ ಎಂಬವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿತ್ತು ಎನ್ನಲಾಗಿದೆ.ಈ ಬಗ್ಗೆ ಕಾಮಗಾರಿ ಉಸ್ತುವಾರಿ ವಹಿಸಿದ ವಾರ್ಡ್ ಸದಸ್ಯರ ಜತೆ ತಿಳಿಸಿದ್ದು, ಆಗ ಆಗ ಅವರು ಇದನ್ನು ನಾನು ಸರಿಪಡಿಸುವುದಿಲ್ಲ ನೀನು ಏನು ಬೇಕಾದರೂ ಮಾಡಿಕೋ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ದೂರಲಾಗಿದೆ.
ಆಗ ಮಾತಿಗೆ ಮಾತು ಬೆಳೆದು ಬಳಿಕ ದಾಮೋದರ ನಾಯ್ಕರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಪಂಚಾಯತ್ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಸಚಿನ್ ರಾಜ್ ಶೆಟ್ಟಿಯವರಲ್ಲಿ ವಿಚಾರಿಸಿದಾಗ ನಾನು ಪಂಚಾಯತ್ ಲೆಕ್ಕದಲ್ಲಿ ಕಣಿರಿಪೇರಿ ಮಾಡಿಸಲು ಹೋಗಿದ್ದೆ ಜೊತೆಗೆ ಪಿಡಿಒ ಹಾಗೂ ಪೊಲೀಸರು ಕೂಡ ಇದ್ದರು.ಅಲ್ಲಿ ಯಾವುದೇ ಗಲಾಟೆಗಳಾಗಿಲ್ಲ.ಕಣಿಯ ಮಣ್ಣು ತೆಗೆದಿದ್ದೇವೆ ಅಷ್ಟೆ.ಬೇಲಿ ನಾಶ ಮಾಡಲಿಲ್ಲ.ಇದು ನನ್ನ ವರ್ಚಸ್ಸಿಗೆ ಕುಂದು ತರಬೇಕು ಎನ್ನುವ ಉದ್ದೇಶದಿಂದ ನನ್ನ ಮೇಲೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.