ನ್ಯೂಸ್ ನಾಟೌಟ್: ಗಡಿಯಲ್ಲಿ ಸೇವೆ ಮಾಡುತ್ತಿದ್ದ ಸೈನಿಕನ ಪತ್ನಿಗೆ ಇತ್ತೀಚೆಗೆ ಹಲ್ಲೆ ಮಾಡಿದ್ದ ಸುದ್ದಿಯೊಂದು ರಾಜ್ಯವ್ಯಾಪ್ತಿ ವೈರಲ್ ಆಗಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಕಬಡ ತಾಲೂಕಿನ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದೆ.
ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಹಲ್ಲೆಗೊಳಗಾದವರು. ಜಾಗದ ತಕರಾರಿನ ವಿಚಾರದಲ್ಲಿ ಪಕ್ಕದ ಮನೆಯವರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಫೌಝಿಯಾ ಹೋಗಿದ್ದರು. ಈ ವೇಳೆ ನೆರೆಯ ಮನೆಯವರು ನಾಲ್ವರು ಜಾಗದ ವಿಚಾರದಲ್ಲಿ ಜಗಳಕ್ಕೆ ಬಂದಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ವೇಳೆ ನಾಲ್ವರು ಫೌಝಿಯಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಪೌಝಿಯಾ ಅವರ ತಂದೆಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ದಿನವೂ ಪುಂಡರ ಗ್ಯಾಂಗ್ ಜಾಗದ ವಿಚಾರದಲ್ಲಿ ಗಲಾಟೆಗೆ ಮುಂದಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.