ನ್ಯೂಸ್ ನಾಟೌಟ್: CM ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ನೀಡಿದೆ. ಈ ಗ್ಯಾರಂಟಿಯಲ್ಲಿ ಗೃಹ ಜ್ಯೋತಿ ಕೂಡ ಒಂದು. ಬಡವರ ಮನೆಗೆ ಉಚಿತವಾಗಿ ಬೆಳಕು ನೀಡುವ ಯೋಜನೆ ಇದಾಗಿದೆ. ಈ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳು ಹಗಲು ಕೂಡ ನಿತ್ಯ ಉರಿಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಹೆದ್ದಾರಿಯ ಸರಣಿ ವಿದ್ಯುತ್ ದೀಪಗಳಿಗೆ ದಿನದ 24 ಗಂಟೆ ವಾರದ 7 ದಿನವೂ ಬೆಳಕಿನ ಭಾಗ್ಯ ದೊರಕಿರುವುದು ಅಚ್ಚರಿಗೆ ಕಾರಣವಾಗಿದೆ. ರಸ್ತೆಯಲ್ಲಿ ಉರಿಯುವ ದೀಪಗಳಿಗೂ ಈಗ ಉಚಿತ ಭಾಗ್ಯವನ್ನು ಸರ್ಕಾರ ನೀಡಿದೆಯೇ? ಎಂದು ಅರಂತೋಡಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಕತ್ತಲಲ್ಲಿ ಮಾತ್ರ ರಸ್ತೆ ಬದಿಯ ಬೀದಿ ದೀಪಗಳು ಆನ್ ಆಗಬೇಕು. ಆದರೆ ಅರಂತೋಡಿನ ಕೆಇಬಿ ಆಫೀಸ್ ನಿಂದ ಅರಂತೋಡು ಕಾಲೇಜು ವರೆಗಿನ ದೀಪಗಳು ಹಗಲಿನಲ್ಲೂ ಆನ್ ಆಗಿರುತ್ತದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನಾದರೂ ಈ ಲೈಟ್ಗಳು ಹಗಲಿನಲ್ಲಿ ಆಫ್ ಆಗುತ್ತವೆಯೇ ಅನ್ನುವುದನ್ನು ಕಾದು ನೋಡಬೇಕಿದೆ.