ನ್ಯೂಸ್ ನಾಟೌಟ್: ‘ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty) ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ಈ ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂದು ಸುದ್ದಿ ವೈರಲ್ ಆಗಿದೆ.
ನಿಧಾನಕ್ಕೆ ಕಾಲಿವುಡ್ ಚಿತ್ರಗಳತ್ತ ನಟಿ ಮುಖ ಮಾಡಿರುವ ಈ ನಟಿಗೆ ಸಿನಿಮಾರಂಗದಲ್ಲಿ ಡಿಮ್ಯಾಂಡ್ ಕಮ್ಮಿಯಾಗಿರುವ ಬೆನ್ನಲ್ಲೇ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಶುರುವಾಗಿದೆ ಎಂಬ ಸುದ್ದಿ ಹರಿದಾಡಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಕೃತಿ ಶೆಟ್ಟಿ ಜೊತೆ ಸ್ನೇಹ ಸಂಪಾದಿಸಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದು, ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಚರ್ಚೆ ಶುರುವಾಗಿದೆ. ಪ್ರತಿ ಈವೆಂಟ್ನಲ್ಲೂ ಆಕೆಯ ಸುತ್ತಾಮುತ್ತಾ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿದೆ. ಆದರೆ ಆ ವ್ಯಕ್ತಿ ಯಾರು ಎಂಬುದು ಎಲ್ಲೂ ರಿವೀಲ್ ಆಗಿಲ್ಲ. ಶೂಟಿಂಗ್ ಬಿಟ್ಟು ನನ್ನ ಬರ್ತ್ಡೇ ಪಾರ್ಟಿಗೆ ಬಾ, ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದು ಆತ ಫೋನ್ ಮಾಡಿ ಕಿರುಕುಳ ನೀಡಿದ್ದಾಗಿ ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ. ಆತ ಯಾರು ಅನ್ನೋದು ಮಾತ್ರ ಆಕೆ ರಿವೀಲ್ ಮಾಡಿಲ್ಲವಂತೆ. ಕೃತಿ ಶೆಟ್ಟಿ ನಾನು ಯಾವುದೇ ಪಾರ್ಟಿಗೆ ಬರಲ್ಲ, ನನಗೆ ಪಾರ್ಟಿಗೆ ಬರೋದು ಇಷ್ಟ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.