ನ್ಯೂಸ್ ನಾಟೌಟ್ : ಅಪಘಾತ ಸಂಭವಿಸಿತೆಂದು ನೋಡೋದಕ್ಕೆ ಬಂದವರ ಮೇಲೆ ಕಾರು ಹರಿದು ಒಂಭತ್ತು ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ದಾರುಣ ಘಟನೆ ವರದಿಯಾಗಿದೆ.ಬೇರೊಂದು ಅಪಘಾತವನ್ನು ನಿಂತು ನೋಡುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವಾರ್ ಕಾರು (Car Accident) ಹರಿದಿದ್ದು, 9 ಜನ ಮೃತಪಟ್ಟಿದ್ದು,20 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ನ ಅಹ್ಮದಾಬಾದ್ ನಗರದ ಮೂಲಕ ಹಾದು ಹೋಗಿರುವ ಸರ್ಕೇಜ್-ಗಾಂಧಿನಗರ ಹೆದ್ದಾರಿಯಲ್ಲಿರುವ ಇಸ್ಕಾನ್ ಫ್ಲೈಓವರ್ ಮೇಲೆ ಬುಧವಾರ ತಡರಾತ್ರಿ ಭಾರಿ ಅಪಘಾತ ಸಂಭವಿಸಿದೆ. ತಡರಾತ್ರಿ 1.30ರ ಸುಮಾರಿಗೆ ಇಸ್ಕಾನ್ ಫ್ಲೈಓವರ್ ಮೇಲೆ ಟ್ರಕ್ ಹಾಗೂ ಎಸ್ಯುವಿ ಕಾರು ಅಪಘಾತಕ್ಕೀಡಾಗಿತ್ತು.ಏನೋ ಸೌಂಡ್ ಆಯ್ತೆಂದು ಸುತ್ತಮುತ್ತಲ ಜನ ಓಡೋಡಿ ಬಂದಿದ್ದರು.ಆ ಸ್ಥಳವನ್ನು ಇದನ್ನು ನೋಡುತ್ತ ಹಲವು ಜನ ನಿಂತಿರುವ ವೇಳೆಗಾಗಲೇ ಯಮಸ್ವರೂಪಿಯಲ್ಲಿ ಬಂದಿರುವ ಕಾರು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬಂದಿದ್ದು,ಇಬ್ಬರು ಪೊಲೀಸರು, ಆರು ವಿದ್ಯಾರ್ಥಿಗಳು ಸೇರಿ ಒಟ್ಟು 9 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 20 ಜನರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿವೆ.
ಕಾರು ಭೀಕರವಾಗಿ ಗುದ್ದಿದ್ದು,ಇದರ ರಭಸಕ್ಕೆ ಜನ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ.ಈ ವೇಳೆ ಸ್ಥಳದಲ್ಲೇ ಆರು ಮಂದಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕಾರಿನ ಚಾಲಕನನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಚಾಲಕ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡ ಕಾರಣ ಭೀಕರವಾಗಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.ಸಾರ್ವಜನಿಕರ ಪ್ರಕಾರ, ಜನರ ಮೇಲೆ ಹರಿದ ಕಾರು 160 ಕಿ.ಮೀ ವೇಗದಲ್ಲಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಜನ ಬೇರೊಂದು ಅಪಘಾತವಾಗಿದ್ದನ್ನು ನೋಡುತ್ತ ನಿಂತಿದ್ದು, ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸುವಷ್ಟರಲ್ಲೇ ಗುದ್ದಿದೆ.ಅಹ್ಮದಾಬಾದ್ನಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತ ಇದಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.