ನ್ಯೂಸ್ ನಾಟೌಟ್:ಸ್ವಿಫ್ಟ್ ಕಾರಿನಲ್ಲಿ ಬಂದು 3,000 ರೂ. ಪೆಟ್ರೋಲ್ ಹಾಕಿಸಿ ವಂಚಕರು ಪರಾರಿಯಾಗಿರುವ ಘಟನೆ ವರದಿಯಾಗಿದೆ.ವಂಚಕರ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರ ಜಿಲ್ಲೆ ಶೃಂಗೇರಿ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿತ್ತು. ಈ ವೇಳೆ ಶಿಫ್ಟ್ ಕಾರೊಂದು ಬಂಕ್ಗೆ ಬಂದು3, 000 ರೂ. ಪೆಟ್ರೋಲ್ ಹಾಕಿಸಿದೆ. ಬಳಿಕ ದುಡ್ಡು ಕೊಡದೆ ಸ್ಥಳದಿಂದ ಪರಾರಿಯಾಗಿದೆ. ಕಾರಿಗೆ ನಂಬರ್ ಪ್ಲೇಟ್ ಇಲ್ಲದಿದ್ದುದರಿಂದ ಪೆಟ್ರೋಲ್ ಬಂಕ್ನವರಿಗೆ ಇಂತಹವರೇ ಎಂದು ಪತ್ತೆ ಹಚ್ಚುವುದು ಸವಾಲಾಯಿತು.
ಈ ಕಾರು ಚೆಕ್ಪೋಸ್ಟ್ನಲ್ಲೂ ಪಾಸ್ ತೆಗೆದುಕೊಳ್ಳದೆ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಶೃಂಗೇರಿಯ ಬಿದರಗೋಡು ಸಮೀಪ ಅದೇ ಸ್ವಿಫ್ಟ್ ಕಾರಿನಲ್ಲಿ ಗೋಕಳ್ಳತನ ನಡೆದಿತ್ತು ಅನ್ನುವುದು ತಿಳಿದು ಬಂದಿದೆ. ಹೀಗಾಗಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಬಜರಂಗದಳ ಒತ್ತಾಯಿಸಿದೆ.