ನ್ಯೂಸ್ ನಾಟೌಟ್ : ಜುಲೈ 1ರಿಂದ ಜಾರಿಯಾಗಲಿರುವ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಕೆಲ ಬದಲಾವಣೆಯಿಂದಾಗಿ ಅರ್ಜಿ ಸಲ್ಲಿಕೆಗೆ ವಿಳಂಬವಾಗಿದ್ದು,ಇಂದಿನಿಂದ ಅರ್ಜಿ ಸಲ್ಲಿಸಬಹುದು.
ಇತ್ತೀಚಿಗೆ ಗೃಹ ಜ್ಯೋತಿ ಯೋಜನೆಗೆ ಇದೇ ತಿಂಗಳು 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಸರ್ಕಾರ ತಿಳಿಸಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸೇವಾಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ವಿಳಂಬವಾಗಿತ್ತು. ಇದರಿಂದ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿತ್ತು.ಇದೀಗ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದ್ದು, ಗೃಹಜ್ಯೋತಿ ಯೋಜನೆ ಅಡಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. https://sevasindhugs.karnataka.gov.in ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ನಲ್ಲೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದಾಗಿದೆ.ಆಧಾರ್ ಕಾರ್ಡ್, ಆರ್ಆರ್ ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ.
ಗೃಹಜ್ಯೋತಿ ಯೋಜನೆ ನೋಂದಣಿಗೆ ನೆಟ್ ಸೆಂಟರ್ ಅಥವಾ ವಿದ್ಯುತ್ ಕಚೇರಿಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ನಿಮಿಷಗಳಲ್ಲಿ ಮೊಬೈಲ್ನಲ್ಲಿಯೇ ಅಥವಾ ಲ್ಯಾಪ್ಟಾಪ್ನಲ್ಲಿ ನೋಂದಣಿ ಮಾಡಬಹುದು.
ಗೃಹಜ್ಯೋತಿ ಉಚಿತ ಯೋಜನೆಗೆ ನೋಂದಣಿಯಾಗಬೇಕು ಎಂದರೆ, ಮನೆಯ ಕರೆಂಟ್ ಬಿಲ್ ಮತ್ತು ಆಧಾರ್ ಕಾರ್ಡ್ ಅತ್ಯಗತ್ಯ. ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಕರೆಂಟ್ ಬಿಲ್ನಲ್ಲಿ ನಮೂದಾರುವ ವಿದ್ಯುತ್ ಸಂಪರ್ಕದ ಖಾತೆ ಸಂಖ್ಯೆ ಕೇಳಲಾಗುತ್ತದೆ. ಜತೆಗೆ ಖಾತೆದಾರರ ಹೆಸರು, ಎಸ್ಕಾಂ ಯಾವುದು (ವಿದ್ಯುತ್ ಸರಬರಾಜು ಕಂಪನಿ) ಎಂಬ ಮಾಹಿತಿ ಕೇಳಲಾಗುತ್ತದೆ. ಇವುಗಳನ್ನು ಹೊರತು ಪಡಿಸಿ ಯಾವುದೇ ದಾಖಲೆಯು ನೋಂದಣಿಗೆ ಇರಲ್ಲ.
ವಿದ್ಯುತ್ ಗೃಹ ಬಹಳಕೆದಾರರೆಲ್ಲಾ ಅರ್ಹರು. ವಾಣಿಜ್ಯ ಕಟ್ಟಡಗಳಿಗೆ ಸೌಲಭ್ಯ ಇಲ್ಲ.