ನ್ಯೂಸ್ ನಾಟೌಟ್: ಜಗತ್ತಿಗೆ ಯೋಗವೆಂಬ ಉತ್ಕೃಷ್ಟ ಪರಿಕಲ್ಪನೆಯನ್ನು ಪರಿಚಯಿಸಿದ್ದು ಭಾರತ. ವ್ಯಕ್ತಿಯೂ ಮನಸ್ಸನ್ನು ಹೆಚ್ಚು ಏಕಾಗ್ರತೆಗೆ ಹೊಂದಿಸಬೇಕಾದರೆ ಧ್ಯಾನ ಹಾಗೂ ಆಸನಗಳು ಅಗತ್ಯ.
ಉತ್ತಮವಾದ ಮಾನಸಿಕ ಆರೋಗ್ಯ ಹಾಗೂ ಸ್ಥಿರವಾದ ಮಾನಸಿಕ ಅಭಿವ್ಯಕ್ತಿಗೆ ಯೋಗವೇ ಪ್ರಧಾನವೆಂದು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರು ಪತಂಜಲಿ ಚಿಕಿತ್ಸಾಲಯದ ಡಾ.ಜ್ಞಾನೇಶ್ವರ್ ನಾಯಕ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಬಿಜಿಎಸ್ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಸಿ, ಬಿಜಿಎಸ್ ಎಜ್ಯುಕೇಶನ್ನ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್, ಬಿಜಿಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು. ಯೋಗ ತರಬೇತುದಾರ ನರಸಿಂಹ ಕುಲಕರ್ಣಿ ವಿದ್ಯಾರ್ಥಿಗಳಿಗೆ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.