ನ್ಯೂಸ್ ನಾಟೌಟ್: ಸೆಲಬ್ರಿಟಿಗಳು ಉಪಯೋಗಿಸಿದ ಕಾರುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲದೇ ಐಕಾನಿಕ್ ಕಾರುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಮರದಿಂದ ನಿರ್ಮಿತವಾದ ಸಿಟ್ರನ್ 2ಸಿವಿ ಕಾರು ದಾಖಲೆಯ ಮೊತ್ತಕ್ಕೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ದಾಖಲೆ ಮೊತ್ತಕ್ಕೆ ಮಾರಾಟವಾದ ಈ ಅಪರೂಪದ ಕಾರಿನ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಈ ಅಪರೂಪದ ಮರದಿಂದ ಮಾಡಿದ ಸಿಟ್ರನ್ 2ಸಿವಿ ಕಾರು 2.10 ಲಕ್ಷ ಪೌಂಡ್ (ಸುಮಾರು 1.86 ಕೋಟಿ ರೂ.)ಗೆ ಹಾರಾಜಿಗನಲ್ಲಿ ಮಾರಾಟವಾಗಿದೆ. ಈ ಕಾರಿನ ಬಾಡಿಯು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಫ್ರಾನ್ಸ್ ನಲ್ಲಿ ನೋಂದಣಿಯಾಗಿರುವ ಈ ವಾಹನವು ಮರದಿಂದ ಮಾಡಲ್ಪಟ್ಟಿದೆ. ಇದನ್ನು ಸಾಮಾನ್ಯ ಕಾರಿನಂತೆ ಬಳಸಬಹುದಾಗಿದೆ. ಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಬಾಡಿಯ ಪ್ಯಾನೆಲ್ ಗಳು ಮತ್ತು ಚಾಸಿಸ್ ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ.
1948 ರಲ್ಲಿ ಫ್ರೆಂಚ್ ವಾಹನ ತಯಾರಕ ಕಂಪನಿಯಾದ ಸಿಟ್ರನ್ ಬಿಡುಗಡೆಮಾಡಿದ 2CV ಮಾದರಿಯ ಮರದ ಕೆತ್ತನೆಯ ಮಾದರಿಯಾಗಿದೆ. ಮರದ ಸಿಟ್ರನ್ 2CV ಮಾಡೆಲ್ ಫ್ರಾನ್ಸ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಅಪರೂಪದ ಕಾರು 2.10 ಲಕ್ಷ ಪೌಂಡ್ಗಳನ್ನು ಪಡೆದುಕೊಂಡಿದೆ, ಅಂದರೆ ಸುಮಾರು 1.86 ಕೋಟಿ ರೂ. ಆಗಿದೆ. ಇದು ಸಿಟ್ರನ್ 2CV ಮಾದರಿಯಾಗಿದೆ.
ಸಿಟ್ರನ್ 2CV ಮಾದರಿಯ ಬಾಡಿಯು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಕುತೂಹಲಕಾರಿಯಾಗಿ, ಈ ಕಾರು ಮರದಿಂದ ಮಾಡಲ್ಪಟ್ಟಿದೆ ಆದರೆ ಸಾಮಾನ್ಯ ಕಾರಿನಂತೆ ಬಳಸಬಹುದು ಮತ್ತು ಇದನ್ನು ಫ್ರಾನ್ಸ್ನಲ್ಲಿ ನೋಂದಾಯಿಸಲಾಗಿದೆ. ಪ್ಯಾರಿಸ್ ಮೂಲದ ವಿಂಟೇಜ್ ಕಾರು ಉತ್ಸಾಹಿ ಮತ್ತು ಮ್ಯೂಸಿಯಂ ಮಾಲೀಕ ಸೀನ್ ಪಾಲ್ ಫಾವಂಡ್ ಬ್ಲಾಕ್-ಫಿನಿಶ್ಡ್ ಕಾರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.