ನ್ಯೂಸ್ ನಾಟೌಟ್ : ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಕ್ಕೆ ಪ್ರೀಮಿಯಂ ಪಾವತಿಗೆ ಯಾವುದೇ ಆದೇಶಗಳು ಬಂದಿಲ್ಲ. ಇದರಿಂದ ಕೃಷಿ ಸಮಸ್ಯೆಗಳು ಎದುರಾಗುತ್ತಿದೆ. ಆದಷ್ಟು ಬೇಗ ಕೃಷಿಕರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ, ಮರ್ಕಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ ಅವರು ಇಂದು ಸುಳ್ಯ ದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರತಿ ವರ್ಷವೂ ಜೂ.30ರೊಳಗೆ ಪ್ರೀಮಿಯಂ ಪಾವತಿಯಾಗುತ್ತಿದ್ದು. ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಕ್ಕೆ ಪ್ರೀಮಿಯಂ ಪಾವತಿಗೆ ಯಾವುದೇ ಆದೇಶಗಳು ಬಂದಿಲ್ಲ ಎನ್ನಲಾಗಿದೆ.
ಬೆಳೆ ವಿಮೆಯ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಸೊಸೈಟಿಗಳಿಗೆ ಈ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ. ಕೃಷಿಕರು ಸೊಸೈಟಿಗೆ ಬಂದು ವಿಮೆಯ ಬಗ್ಗೆ ಕೇಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ ಪಾವತಿದಾರರು ಹೆಚ್ಚಾಗುತ್ತಿದ್ದಾರೆ. ಬೆಳೆವಿಮೆ ರೈತರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಈ ಬಾರಿ ಬೆಳೆ ವಿಮೆ ಪಾವತಿಯೇ ಆಗದಿರುವುದರಿಂದ ಕೃಷಿಕರು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ವಿಳೆವಿಮೆ ಪಾವತಿಗೆ ಸಹಕಾರಿ ಸಂಘಗಳಿಗೆ ತಕ್ಷಣ ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಹಕಾರಿ ಯೂನಿಯನ್ ಅಧ್ಯಕ್ಷರಾದ ರಮೇಶ್ ದೇಲಂಪಾಡಿ, ರೈತರಿಗೆ ಹವಾಮಾನಾಧರಿತ ವಿಮೆ ಸಮಸ್ಯೆ ಹಾಗೂ ಗೊಂದಲಗಳು ಉಂಟಾಗುತ್ತಿವೆ . ಜೂನ್ ೧ ರಿಂದ ಪ್ರೀಮಿಯಂ ಕಲೆಕ್ಷನ್ ಜುಲೈ ೩೦ ರೊಳಗೆ ಆಗುತ್ತಿದೆ. ಆದರೆ ಈ ಬಾರಿ ಕೃಷಿಕರಿಗೆ ಸರಕಾರದಿಂದ ಇನ್ಸೂರನ್ಸ್ ಸಹಕಾರಿ ಸಂಘಗಳಿಗೆ ವಿಮೆಪಾವತಿ ತಡವಾಗುತ್ತಿದೆ. ರಾಜ್ಯ ಸರ್ಕಾರ ಈ ಆದಷ್ಟು ಬೇಗ ರೈತರ ಹವಾಮಾನಾಧರಿತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕರಾದ ವಿಷ್ಣು ಭಟ್ , ದಯಾನಂದ ಕುರುಂಜಿ , ಶಾರದಾ ಡಿ .ಶೆಟ್ಟಿ , ಯೂನಿಯನ್ ಸೆಕ್ರಟೆರಿ ವಾಸುದೇವ್ ನಾಯಕ್ ಉಪಸ್ಥಿತರಿದ್ದರು.