ನ್ಯೂಸ್ ನಾಟೌಟ್ : ದ್ವಿಚಕ್ರ ವಾಹನದಲ್ಲಿ ಎರಡೇ ಜನರಿಗೆ ಕುಳಿತುಕೊಳ್ಳಲು ಅವಕಾಶವಿರೋದು. ಆದರೆ, ಮಹಾರಾಷ್ಟ್ರದಲ್ಲೊಬ್ಬ ಭೂಪ ಸ್ಕೂಟಿಯಲ್ಲಿ ಏಳು ಮಕ್ಕಳನ್ನು ಕೂರಿಸಿಕೊಂಡು ವಾಹನ ಚಲಾಯಿಸಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾನದಲ್ಲಿ ಸಕತ್ (Viral Video) ವೈರಲ್ ಆಗಿದೆ.
ಹೌದು,ಇಂತಹ ಸಾಹಸ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.ಮುಂಬೈ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಮುಂಬೈ ಟ್ರಾಫಿಕ್ ಪೊಲೀಸರು “ಇಂತಹ ಬೈಕ್ ಸವಾರಿಯನ್ನು ನಾವು ಸಹಿಸುವುದಿಲ್ಲ.ವಾಹನ ಸವಾರನು ಅವನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದ್ದಲ್ಲದೇ ಬೇರೆಯವರ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸುವ ರೈಡಿಂಗ್ ಇದು. ಇದು ನರಹತ್ಯೆಗೆ ಸಮನಾದ ಅಪರಾಧ” ಎಂದು ಹೇಳಿದ್ದಾರೆ.
ವಿಡಿಯೊ ವೈರಲ್ ಆಗುತ್ತಲೇ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.ಈತ ಮಕ್ಕಳ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ. ಇವನನ್ನು ಬಂಧಿಸಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.