ನ್ಯೂಸ್ ನಾಟೌಟ್ : ಮನೆಯಲ್ಲಿದ್ದ ಯುವಕನೊಬ್ಬ ಹಠಾತ್ ನಾಪತ್ತೆಯಾಗಿದ್ದು ಆತನನ್ನು ಹುಡುಕಿಕೊಡುವಂತೆ ಸಹೋದರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಕಕ್ಕೇನಾದ ನಿವಾಸಿ ಭರತ್ ಕುಮಾರ್ (33) ನಾಪತ್ತೆಯಾದವರಾಗಿದ್ದಾರೆ. ಸದ್ಯ ಅವರ ಪತ್ತೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅವರ ಸಹೋದರ ರವಿ ನಾಯ್ಕ್ ದೂರು ನೀಡಿದ್ದಾರೆ.ಭರತ್ ಕುಮಾರ್ ಪೈಟಿಂಗ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ 05.06.2023 ಬೆಳಗ್ಗೆ ಸುಮಾರು 10.30ಕ್ಕೆ ಮನೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದಾರೆ. ಇದುವರೆಗೆ ವಾಪಸ್ ಬಂದಿಲ್ಲ. ದೂರವಾಣಿ ಕರೆ ಮಾಡಲಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಮೊದಲು ಕೆಲಸಕ್ಕೆ ಹೋದವನು 2-3 ವಾರ ಬಿಟ್ಟು ಮನೆಗೆ ವಾಪಸ್ಸು ಬರುತ್ತಿದ್ದ. ಹಾಗೆ ಆಗಿರಬಹುದು ಎಂದು ತಿಳಿದು ಪತ್ತೆಗೆ ಪ್ರಯತ್ನಿಸಲಿಲ್ಲ. ಆದರೆ ಇಲ್ಲಿಯವರೆಗೆ ಮನೆಗೆ ವಾಪಸು ಬಾರದೇ ಇರುವುದರಿಂದ ಸಂಬಂಧಿಕರಲ್ಲಿ ವಿಚಾರಿಸಿ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಸಹೋದರ ತಿಳಿಸಿದ್ದಾರೆ.