ನ್ಯೂಸ್ ನಾಟೌಟ್ : ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮಹಿಳೆಯ ಪ್ರಾಣ ರಕ್ಷಿಸಿದ ಮಂಗಳೂರಿನ ಬಸ್ ಚಾಲಕನ ವಿರುದ್ಧವೇ ಪ್ರಕರಣ ದಾಖಲಾಗಿರುವ ಘಟನೆ ಬಿದ್ದಿದೆ.ಪ್ರಾಣ ರಕ್ಷಿಸಿದ ಡ್ರೈವರ್ಗೆ ಪುರಸ್ಕಾರದ ಮಾತುಗಳನ್ನು ಆಡುವುದನ್ನು ಬಿಟ್ಟು ದೂರು ದಾಖಲಾಗಿರುವುದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.ಮುಸ್ಲಿಂ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಬಸ್ವೊಂದು ಬಂದು ಡಿಕ್ಕಿಯಾಗುವ ಸನಿಹದಲ್ಲಿತ್ತು. ಆದರೆ ಅದೃಷ್ಟವಶಾತ್ ಚಾಲಕನ ಸಮಯೋಚಿತ ಪ್ರಯತ್ನದಿಂದ ಮಹಿಳೆಯೊಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಂಗಳೂರಿನ ತೌಡುಗೋಳಿ ಕ್ರಾಸ್ ಬಳಿ ಜೂ.20 ರಂದು ನಡೆದಿತ್ತು.
ಅಂದು ಮಧ್ಯಾಹ್ನ ಮುಡಿಪುನಿಂದ ತೌಡುಗೋಳಿ ಮಾರ್ಗವಾಗಿ ಮಂಗಳೂರು ಕಡೆಗೆ ಗೋಪಾಲಕೃಷ್ಣ ಬಸ್ಸಿನ ಚಾಲಕ ತ್ಯಾಗರಾಜ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ದುಡುಕುತನ ಹಾಗೂ ನಿರ್ಲಕ್ಷತನದಿಂದ, ಕರ್ಕಶ ಹಾರ್ನ್ ಹಾಕುತ್ತಾ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದರು ಎಂದು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಅಪಘಾತದ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಬಸ್ ಚಾಲಕನ ಚಾಣಾಕ್ಷತನದಿಂದ ಮಹಿಳೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಮಹಿಳೆಯನ್ನು ರಕ್ಷಿಸಿದ ಬಸ್ ಚಾಲಕನಿಗೆ ಜನ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದರು. ಸಿಸಿ ಟಿವಿ ದೃಶ್ಯವನ್ನು ಗಮನಿಸಿದಾಗ ಮಹಿಳೆಯೋರ್ವರು ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಬಸ್ ಡ್ರೈವರ್ ಬಸ್ ನ್ನು ಎಡಕ್ಕೆ ಸರಿಸಿ ಕೂದಲೆಳೆ ಅಂತರದಲ್ಲಿ ಮಹಿಳೆಯನ್ನು ರಕ್ಷಿಸಿದ್ದಾರೆ. ಹಾಗೂ ಚಾಲಕನ ಸಮಯಪ್ರಜ್ಞೆ ಹಾಗೂ ಚಾಣಾಕ್ಷತನಕ್ಕೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಳಿಕ ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿ ಕೊಟ್ಟಿದ್ದಾರೆ.