ನ್ಯೂಸ್ ನಾಟೌಟ್: ದೇಶ ವಿರೋಧಿ ಕೃತ್ಯವೆಸಗುತ್ತಿರುವವರಿಗೆ ಸರ್ಕಾರ ಅಂಕುಶ ಹಾಕಿದರೂ ಕಿಡಿಗೇಡಿಗಳು ಮಾತ್ರ ತಮ್ಮ ಚಾಳಿಯನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ವನ್ನು ಶ್ಲಾಘಿಸುವ ಸ್ಟಿಕ್ಕರ್ಗಳನ್ನು ಅಂಟಿಸಿ ಮತ್ತು ಮನೆಗಳಿಗೆ ಪಟಾಕಿ, ಬಾಂಬ್ಗಳನ್ನು ಕಟ್ಟಿರುವ ಕಿಡಿಗೇಡಿಗಳ ದೇಶವಿರೋಧಿ ಕೃತ್ಯ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಗಳ ಗುಂಪು ಈ ಕಿಡಿಗೇಡಿ ಕೃತ್ಯವನ್ನು ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಟಿಕ್ಕರ್ಗಳ ಮೇಲೆ ಹಸಿರು ಶಾಯಿಯಿಂದ ಪಿಎಫ್ಐ ಜಿಂದಾಬಾದ್ ಮತ್ತು 786 ಎಂದು ಬರೆದು ಹೊಸ ಪನ್ವೆಲ್ ಪ್ರದೇಶದ ಮನೆಯೊಂದರ ಪ್ರವೇಶದ್ವಾರದಲ್ಲಿ ಅಂಟಿಸಿದ್ದಾರೆ.
ಅಲ್ಲದೇ, ಇಲ್ಲಿನ ಇತರ ಎರಡು ಮನೆಗಳ ಮುಂದೆ ಪಟಾಕಿ ಬಾಂಬ್ ಮತ್ತು ಅಗರಬತ್ತಿಗಳನ್ನು ಕಟ್ಟಿರುವುದು ಕಂಡು ಬಂದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ಎಲ್ಲ ಸಾಮಗ್ರಿಗಳನ್ನು ವಶಕ್ಕೆ ಪಡೆದು ಈ ಕುರಿತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಐಸಿಸ್ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಕೇಂದ್ರ ಸರ್ಕಾರವು ಪಿಎಫ್ಐ ಅನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.