ನ್ಯೂಸ್ ನಾಟೌಟ್ : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿ ನಡೆದಿದೆ.ನಾಗಪಟ್ಟಣದ ನಿವಾಸಿ ಮಣಿಕಂಠ (29) ಆತ್ಮಹತ್ಯೆಗೆ ಶರಣಾದ ಯುವಕ.
ಮಣಿಕಂಠ ಅವರು ಜಾಲ್ಸೂರು ಗೇರು ಬೀಜ ಕಾರ್ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.ಜಾಲ್ಸೂರಿನಿಂದ ನಿನ್ನೆ ತಡ ರಾತ್ರಿ ಮನೆಗೆ ಬಂದ ಯುವಕ ತಾಯಿಯ ಸೀರೆ ಬಳಸಿ ಮನೆ ಸಮೀಪದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಇಂದು ಬೆಳಗ್ಗೆ ಬೈಕ್ ಮನೆ ಎದುರು ನಿಂತಿದ್ದು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿದ್ದು ಪ್ರಕರಣ ದಾಖಲಿಸಿದ್ದಾರೆ. ಮಣಿಕಂಠ ರವರ ತಂದೆ ಕೆಎಫ್.ಡಿ.ಸಿ ನಿವೃತ್ತ ಉದ್ಯೋಗಿ ಆರ್ ಕುಮಾರ್ , ತಾಯಿ ಪದ್ಮಾವತಿ, ಸಹೋದರ ಬಾಲಕೃಷ್ಣ ನಾಗಪಟ್ಟಣ, ಅತ್ತಿಗೆ ಗೀತಾ, ಚಿಕ್ಕಪ್ಪ ಮುತ್ತಯ್ಯ, ಸಹೋದರರಾದ ಭರತ್ ,ಬಾಲಸುಬ್ರಹ್ಮಣ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.