ನ್ಯೂಸ್ ನಾಟೌಟ್ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ, ಆರೋಪಿಗಳ ಪತ್ತೆಗೆ NIA ಅಧಿಕಾರಿಗಳು ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಿದ್ದು, ಸಾರ್ವಜನಿಕ ಘೋಷಣೆಯ ಬಳಿಕ, ನೋಟೀಸ್ ನೀಡಲು ಆರೋಪಿಗಳ ಮನೆಗೆ ತೆರಳಿ ಮನೆಯವರಿಗೆ ಎಚ್ಚರಿಕೆ ನೀಡಿ ಮನೆಯ ಗೋಡೆಗೆ ನೋಟೀಸ್ ಅಂಟಿಸಿದ ಘಟನೆ ಗುರುವಾರ ನಡೆದಿದೆ.
ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ NIA ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಆರೋಪಿಗಳು ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಮನೆಯವರಿಗೂ ನೋಟೀಸ್ ನೀಡಲಾಗಿದೆ ಮತ್ತು ಇಂದು(ಜೂನ್ ೩೦) ಕೊನೇಯ ಗಡುವಾಗಿದೆ ಎಂದು ವರದಿ ತಿಳಿಸಿದೆ.
ಮುಸ್ತಫಾ ಪೈಚಾರ್ ,ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್ , ತುಫೇಲ್ ,ಮಸೂದ್ ಅಗ್ನಾಡಿ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ NIA ತಲಾಶ್ ಮುಂದುವರೆದಿದ್ದು, ಬೆಳ್ಳಾರೆ , ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಆರೋಪಿಗಳುಗಾಗಿ NIA ತಲಾಶ್ ನಡೆಸಲಾಗುತ್ತಿದೆ.
ತಲೆ ಮರೆಸಿಕೊಂಡಿರುವ ಆರೋಪಿಗಳ ಬಾವ ಚಿತ್ರವಿರುವ ನೋಟಿಸ್ ಅಂಟಿಸಿದ NIA ಅಧಿಕಾರಿಗಳು, ವಾಂಡೆಟ್ ಪೊಸ್ಟರ್ ಅಂಟಿಸಿ ಸಾರ್ವಜನಿಕರಲ್ಲಿ ಆರೋಪಿಗಳನ್ನು ಗುರುತು ಸಿಕ್ಕರೆ ತಿಳಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿಗಳ ಮನೆಯ ಗೋಡೆ ಮೇಲೂ ಪೊಸ್ಟರ್ ಅಂಟಿಸಿದ NIA ಅಧಿಕಾರಿಗಳು ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.