ನ್ಯೂಸ್ ನಾಟೌಟ್: ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಆಂತರಿಕ ಗುಣಮಟ್ಟ ಖಾತರಿ ಕೋಶದ ಆಶ್ರಯದಲ್ಲಿ ಜೂನ್ 21 ರಂದು ಕಾಲೇಜಿನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರಕುಮಾರ್ ಎಂ.ಎA ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಉಷಾ ಕೆ ಪ್ರಶಿಕ್ಷಕಿ ಆರ್ಟ್ ಅಫ್ ಲಿವಿಂಗ್, ಸುಳ್ಯ ಶಾಖೆ ಇವರು ಯೋಗ ಮತ್ತು ಪ್ರಾಣಾಯಾಮದ ಪ್ರಾಮುಖ್ಯತೆ ಮತ್ತು ವಿವಿಧ ಆಸನಗಳ ಬಗ್ಗೆ ಪ್ರಾತ್ಯಕ್ಷಿಕಾ ತರಬೇತಿಯನ್ನು ನೀಡಿದರು.
ಶ್ರೀಮತಿ ರತ್ನಾವತಿ.ಡಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಇವರು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಶ್ರೀಮತಿ ಮಮತಾ.ಕೆ ಸ್ವಾಗತ ನುಡಿಗಳನ್ನಾಡಿದರು. ಶ್ರೀಮತಿ ಭವ್ಯ.ಪಿ.ಎಮ್ ಇಂಗ್ಲೀಷ್ ವಿಭಾಗ ಮುಖ್ಯಸ್ಥರು ವಂದಿಸಿದರು ಮತ್ತು ಕಾಲೇಜಿನ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿ ವೃಂದ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.