ನ್ಯೂಸ್ ನಾಟೌಟ್ : ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎಲ್ಎಲ್.ಬಿ ನಂತರದ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಶುಕ್ರವಾರ (ಜೂ.2) ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು .
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸರ್ವಜ್ಞ ಅಕಾಡೆಮಿ ಮಂಗಳೂರು ಇಲ್ಲಿಯ ನಿರ್ದೇಶಕ ಸುರೇಶ್ ಎಂ. ಎಸ್. ಮಾತನಾಡಿ, ಕಾನೂನು ಪದವಿ ನಂತರದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಉದಯಕೃಷ್ಣ. ಬಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಜಯರಾಮ್ ವೈ. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಮತ್ತು ಕವನ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಲನ್ ಬಿ.ಕೆ ಸ್ವಾಗತಿಸಿ, ಲತಾಕುಮಾರಿ ಕೆ.ಡಿ. ವಂದಿಸಿದರು. ನಿಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.