ನ್ಯೂಸ್ ನಾಟೌಟ್ : ಸುಳ್ಯದಲ್ಲಿ ನೂತನವಾಗಿ ಆರಂಭಗೊಂಡ ನಾಟ್ಯಸಿಂಧು ಶಾಸ್ತ್ರೀಯ ಭರತನಾಟ್ಯ ತರಗತಿಗಳ ಶುಭಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾ ತಪಸ್ವಿ, ನಾಟ್ಯ ಕಲಾ ಸಿಂಧೂ ನಾಟ್ಯ ನಿಲಯಂ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶವರ ಅವರು (ಜೂನ್ ೬) ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಕು.ಸಿಂಧೂ ಪ್ರಭು ಇವರಿಂದ ಆರಂಭವಾದ ಈ ತರಗತಿಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರ ಕಿಲಂಗೋಡಿ ನಿರ್ವಹಿಸಿದರು . ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಶಾಸಕಿ , ಕುಮಾರಿ ಭಾಗೀರಥಿ ಮುರಳ್ಯ , ಉಪಾಧ್ಯಕ್ಷ ಸುಳ್ಯ ಪ್ರಾ.ಕೃ. ಪ.ಸ.ಸಂಘ ಶೀನಪ್ಪ ಬಯಲು, ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪುತ್ತೂರು ನಿರ್ದೇಶಕರು ಹೇಮಂತ್ ಕುಮಾರ್ ಕಂದಡ್ಕ, ಕುಮಾರಿ ಸಿಂಧೂ ಪ್ರಭು, ಯಶೋಧಾ , ವಾಸುದೇವ ಪ್ರಭು ಮತ್ತು ಮಕ್ಕಳು ಹಾಗೂ ದಾಖಲಾತಿಗೆ ಬಂದ ಮಕ್ಕಳು ಮತ್ತು ಪೋಷಕರು ಉಪಸ್ಥತರಿದ್ದರು.
ಈ ವೇಳೆ ಬಾಲಕೃಷ್ಣ ಮಾಸ್ಟರ್ ಹಾಗೂ ಶಾಸಕಿ ಕುಮಾರಿ ಭಾಗೀರಥಿ ಮುರಳ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.