ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಕರ್ಣಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆ ಚಾಲನೆ ಕಾರ್ಯಕ್ರಮ ಸುಳ್ಯದ ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ದೀಪ ಬೆಳಗಿಸಿ ನೆರವೇರಿಸಿದರು. ಈ ವೇಳೆ ಮಾತಾಡಿದ ಅವರು ಈ ಪ್ರಿ ಸೌಲಭ್ಯವನ್ನು ಎಲ್ಲಾ ಮಹಿಳೆಯರು ಸದುಪಯೋಗಪಡಿಸಿಕೊಳ್ಳ ಬೇಕು ಹಾಗೂ ೩ತಿಂಗಳು ಆಧಾರ್ ಕಾರ್ಡನ್ನು ತೋರಿಸಿ ಕರ್ನಾಟಕದಲ್ಲಿ ಪ್ರಯಾಣಿಸಹುದು. ನಂತರ ಸರಕಾರದ ಸ್ಮಾರ್ಟ್ ಕಾರ್ಡ್ ಬರಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಸುಳ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮತ್ತು ನಗರ ಪಂಚಾಯತ್ ನ ಮುಖ್ಯ ಅಧಿಕಾರಿ ಎಂ ಎಚ್ ಸುಧಾಕರ್ ಹಾಗು ನಗರ ಪಂಚಾಯತ್ ನ ಕಾಂಗ್ರೆಸ್ ಸದಸ್ಯ ವೆಂಕಪ್ಪ, ಸುಳ್ಯ ಕೆ. ಎಸ್. ಆರ್. ಟಿ. ಸಿಯ ಸಿಬ್ಬಂದಿ ರೇವತಿ ಕೆ, ಕಾಂಗ್ರೆಸ್ ವಕ್ತಾರ ಟಿ. ಎಂ. ಶಹೀದ್ ತೆಕ್ಕಿ ಲ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಪಿ.ಸಿ ಜಯರಾಮ, ಮಂಜುನಾಥ್ ಶೆಟ್ಟಿ, ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.