ನ್ಯೂಸ್ ನಾಟೌಟ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ವಂಚನೆಯಾಗಿದೆ ಎನ್ನುವ ಸುದ್ದಿಯೊಂದು ಕೆಲ ದಿನಗಳಿಂದ ಬಾರಿ ವೈರಲ್ ಆಗಿತ್ತು. ಇದೀಗ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದ್ದು,ರಶ್ಮಿಕಾಗೆ ವಂಚನೆಯಾಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ 80 ಲಕ್ಷ ರೂ. ವಂಚನೆಯಾಗಿದೆ. ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು.ಮಾತ್ರವಲ್ಲ ವಂಚನೆ ಎಸಗಿದ ಬಗ್ಗೆ ಗೊತ್ತಾದ ಕೂಡಲೇ ನಟಿ ಮ್ಯಾನೇಜರ್ ನನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿತ್ತು.ಇದೀಗ ರಶ್ಮಿಕಾ ಮಂದಣ್ಣ ಆಪ್ತ ಮೂಲಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅವರಿಗೆ ಅವರ ಮ್ಯಾನೇಜರ್ 80 ಲಕ್ಷ ರೂ. ವಂಚಿಸಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ಅವರನ್ನು ರಶ್ಮಿಕಾ ಅವರು ವಜಾಗೊಳಿಸಿದ್ದಲ್ಲ ಮ್ಯಾನೇಜರ್ ವೈಯಕ್ತಿಕ ಕಾರಣದಿಂದ ಕೆಲಸವನ್ನು ಬಿಟ್ಟಿದ್ದಾರೆ ಅಷ್ಟೇ. ಇಲ್ಲಿ ಯಾವುದೇ ವಂಚನೆ ಆಗಿಲ್ಲ ಎಂದು ನಟಿಯ ಆಪ್ತ ಮೂಲಗಳು ದೃಢಪಡಿಸಿದೆ.
Follow our Social media pages:
FB PAGE : https://www.facebook.com/NewsNotOut2023
YouTube : https://www.youtube.com/@newsnotout8209
Insta : https://www.instagram.com/newsnotout/
Tweet : https://twitter.com/News_Not_Out