ನ್ಯೂಸ್ ನಾಟೌಟ್: ಚುನಾವಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಸಂಪಾಜೆಯ ನೂರುಲ್ ಹುದಾ ಮದ್ರಸದಲ್ಲಿ ಇವಿಎಂ ಯಂತ್ರದ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು. ಇದು ಬಹಳ ಅಪರೂಪದ ಪ್ರಕ್ರಿಯೆ ಆಗಿದ್ದು ಶಾಲಾ ಆಡಳಿತ ಮಂಡಳಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋಗಳು ವೈರಲ್ ಆಗುತ್ತಿದೆ.
ನೂರುಲ್ ಹುದಾ ಮದ್ರಸ 2023-24 ಸಾಲಿನ SBV ಯ ಮತದಾನವು ಇತ್ತೀಚೆಗೆ ನಡೆಯಿತು. ಶೇ.97% ರಷ್ಟು ಮಕ್ಕಳು ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ನಾಲ್ವರು ವಿದ್ಯಾರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಈ ಸಲದ ಚುನಾವಣೆಯಲ್ಲಿ ದೇಶದಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿಯೇ ಮಾಡುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿತು. ಇದಕ್ಕಾಗಿ ಟ್ಯಾಬ್ ವೊಂದನ್ನು ತಂದು ಇವಿಎಂ ಮೆಷಿನ್ ರೀತಿಯಲ್ಲಿ ಬಳಸಿಕೊಳ್ಳಲಾಯಿತು. ದೇಶದಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲೇ ಚುನಾವಣೆ ನಡೆಯಿತು.
ಮೊದಲ ಅಭ್ಯರ್ಥಿಯಾಗಿ ಟೋಪಿ ಚಿಹ್ನೆಯ ಮುಝಮ್ಮಿಲ್, ಎರಡನೇ ಅಭ್ಯರ್ಥಿಯಾಗಿ ಪುಸ್ತಕ ಚಿಹ್ನೆಯ ಶಹಾಂ, ಮೂರನೇ ಅಭ್ಯರ್ಥಿಯಾಗಿ ಗಡಿಯಾರ ಚಿಹ್ನೆಯ ಸಫ್ರತ್ ಹಾಗೂ ನಾಲ್ಕನೇ ಅಭ್ಯರ್ಥಿಯಾಗಿ ಲೇಖನಿ ಚಿಹ್ನೆಯ ಮುಹಮ್ಮದ್ ಹಾಶಿರ್ ಸ್ಪರ್ಧಿಸಿದ್ದರು.
ಮತ ಎಣಿಕೆ ಪೂರ್ತಿತಾಗಿ ಲೇಖನಿ ಚಿಹ್ನೆಯ ಮುಹಮ್ಮದ್ ಹಾಶಿರ್ ವಿಜೇತರೆಂದು ನಿರ್ಧರಿಸಲಾಯಿತು. ಅವರು ಶೇ.68% ರಷ್ಟು ಬಹು ಮತದ ಮತಗಳನ್ನು ಪಡೆದುಕೊಂಡು ವಿದ್ಯಾರ್ಥಿ ನಾಯಕರಾಗಿ ಆಯ್ಕೆಗೊಂಡರು. ಚುನಾವಣಾ ಅಧಿಕಾರಿಗಳಾಗಿ ಅಧ್ಯಾಪಕರಾದ ಯೂಸುಫ್ ಸವಾದ್ ಫೈಝಿ ಅಲ್- ಅಲ್ ಮಬರಿ, ಜಬ್ಬಾರ್ ಅಝ್ಹರಿ, ಪಂಚಾಯತ್ ಸದಸ್ಯರಾದ ಹನೀಫ್ ಎಸ್ ಕೆ, ತಅ್ಝೀರ್ ಸಂಪಾಜೆ ಮತ್ತು ಹಾಶಿರ್ ಸಂಪಾಜೆ ಕಾರ್ಯನಿರ್ವಹಿಸಿದರು.