ನ್ಯೂಸ್ ನಾಟೌಟ್ : ಮಡಿಕೇರಿ ಪ್ರಾದೇಶಿಕ ವಿಭಾಗ , ಸಂಪಾಜೆ ಪ್ರಾಥಮಿಕ ವಲಯ 2023ನೇ ಸಾಲಿನ ವಿಶ್ವಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ವೇಳೆ ಮಾತನಾಡಿ ಆರ್ಎಫ್ಒ ಮಧುಸೂದನ್, ಅರಣ್ಯ ಇಲಾಖೆಯವರು ಗಿಡಗಳನ್ನು ನೆಟ್ಟು ಬೆಳೆಸಿ ನಾಡು ಉಳಿಸಿ ಸಂದೇಶ ಸಾರುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿವರಿಸಿ ವಿದ್ಯಾರ್ಥಿಗಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಸಿದರು.
ಸಂಪಾಜೆ , ಕೊಯನಾಡು, ಶಾಲಾ ಮಕ್ಕಳಿಗೆ ವಿವಿಧ ತಳಿಯ ಗಿಡಗಳನ್ನು ವಿತರಿಸಲಾಯಿತು. ಡಿವೈಆರ್ಫ್ ವಿಜೇಂದ್ರ ಕುಮಾರ್ ಮತ್ತು ಬಸವರಾಜ್ , ಬೀಟ್ ಫಾರೆಸ್ಟರ್ ಜನಾರ್ದನ್ , ಪುನೀತ್, ಜಗನ್ನಾಥ್ , ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ , ನವೀನ್ , ರಮಾದೇವಿ ಕಳಗಿ ಹಾಗೂ ಕೊಯನಾಡಿನ ಶಾಲಾ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.