ನ್ಯೂಸ್ ನಾಟೌಟ್ : ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮೈಮೇಲೆ ಬಿದ್ದು ಸುಳ್ಯಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ ಮೃತಪಟ್ಟಿರುವ ಘಟನೆ ಇಂದು(ಜೂನ್ 5) ನಡೆದಿದೆ.
ಬಡಗನ್ನೂರು ಗ್ರಾಮದ ಬಟ್ಯಂಗಲ ದಿ. ಕೊಲ್ಲಯ್ಯ ಒಕ್ಕಲಿಗ ಎಂಬವರ ಪುತ್ರ ಗೋಪಾಲಕೃಷ್ಣ ಮೃತರಾಗಿದ್ದು, ಮನೆಯ ಜಾಗದಲ್ಲಿ ಮರದ ದಿಮ್ಮಿಯನ್ನು ಪಿಕಪ್ ಗೆ ತುಂಬಿಸುವ ವೇಳೆ ಮರದ ದಿಮ್ಮಿ ಹಿಂದಕ್ಕೆ ಬಂದು ಗೋಪಾಲಕೃಷ್ಣ ರವರ ಮೈಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದರು ಎನ್ನಲಾಗಿದೆ.
ಮೃತ ಗೋಪಾಲಕೃಷ್ಣ ರವರು ಬಡಗನ್ನೂರು ಗ್ರಾ.ಪಂ ಸದಸ್ಯ ಹಾಗೂ ಸುಳ್ಯಪದವು ಯುವ ಶಕ್ತಿ ಬಳಗದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.