ನ್ಯೂಸ್ ನಾಟೌಟ್: ಬಿಜೆಪಿ ನಾಯಕರ ಬ್ಯಾನರ್ ಗೆ ಚಪ್ಪಲಿ ಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೌರ್ಜನ್ಯಕ್ಕೊಳಕ್ಕಾದ ಹಿಂದೂ ಕಾರ್ಯಕರ್ತರನ್ನು ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಸದಸ್ಯರು ಹಿಂದೂ ಕಾರ್ಯಕರ್ತರಿಗೆ ಆರ್ಥಿಕ ಧನ ಸಹಾಯ ನೀಡಿ ಸಾಂತ್ವನ ಹೇಳಿದರು.
ಈಗಾಗಲೇ ಆಸ್ಪತ್ರೆಯ ಹಾಗೂ ಇತರ ಖರ್ಚು ವೆಚ್ಚ ಪುತ್ತಿಲ ಪರಿವಾರದದಿಂದ ನೀಡಲಾಗಿದ್ದು, ದೌರ್ಜನ್ಯಕ್ಕೊಳಕ್ಕಾದವರು ಕೆಲ ತಿಂಗಳು ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಅವರ ದೈನಂದಿನ ಖರ್ಚು ವೆಚ್ಚಗಳಿಗಾಗಿ ಪುತ್ತಿಲ ಪರಿವಾರದ ವತಿಯಿಂದ ಸಂಗ್ರಹಿಸಿದ ರೂ.1 ಲಕ್ಷ ರೂ.ವನ್ನು ನೀಡಲಾಯಿತು.
ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಅಂಬಿಕಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ, ಬೀಮ್ ಭಟ್ , ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಅವಿನಾಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವಿಟ್ಲ ಕನ್ಯಾನದಲ್ಲಿರುವ ಭಾರತ್ ಸೇವಾ ಆಶ್ರಮಕ್ಕೆ ಭೇಟಿ ನೀಡಿ ಪುತ್ತಿಲ ಪರಿವಾರದ ವತಿಯಿಂದ ರೂ. 25000 ದೇಣಿಗೆಯನ್ನು ನೀಡಲಾಯಿತು.
ಈ ಆಶ್ರಮದಲ್ಲಿರುವ ಜನಸಂಘ ಕಾಲದಿಂದಲೂ ನಿಶ್ವಾರ್ಥ ಸೇವೆಯನ್ನು ಸಲ್ಲಿಸಿರುವ ಹಿಂದೂ , ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಗ್ರಂಥಗಳ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿರುವ ಶ್ರೀ ಶಶಿಕಾಂತ್ ಬೋರ್ಕರ್ ಇವರನ್ನು ಸನ್ಮಾನಿಸಿ ಪರಿವಾರದ ವತಿಯಿಂದ ಧನಸಹಾಯವನ್ನು ನೀಡಿ ಗೌರವಿಸಲಾಗಿದೆ.