ನ್ಯೂಸ್ ನಾಟೌಟ್ : ಎಲ್ಲಾದರೂ ಅಪಘಾತ ಸಂಭವಿಸಿದ್ರೆ ಜನ ರಕ್ಷಣೆಗೆ ಮುಂದಾಗುವುದು ಬಿಟ್ಟು ಫೋಟೋ ತೆಗೆಯುವುದರಲ್ಲೇ ಬ್ಯುಸಿಯಾಗಿರುವುದನ್ನು ನೋಡಿದ್ದೇವೆ. ಆದರೆ ಒಡಿಶಾದಲ್ಲಿ ನಡೆದ ಭಾರೀ ದುರಂತದ ವೇಳೆ ಜನರೇ ಸ್ವಯಂ ಪ್ರೇರಿತರಾಗಿ ಗಾಯಾಳುಗಳಿಗೆ ರಕ್ತದಾನ ಮಾಡಲು ಕ್ಯೂ ನಲ್ಲಿ ನಿಂತಿದ್ದು ವಿಶೇಷವಾಗಿತ್ತು.
ರೈಲು ದುರಂತದಲ್ಲಿ ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು, ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ತಮ್ಮವರನ್ನು ಕಳೆದು ಕೊಂಡು ನೋವು ಅನುಭವಿಸುತ್ತಿರುವವರ ಸಂಖ್ಯೆ ಒಂದೆಡೆಯಾದರೆ, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವವರ ಸಂಖ್ಯೆ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇಂತಹ ಭೀಕರ ದೃಶ್ಯವನ್ನು ನೋಡಿದ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಸರತಿ ಸಾಲಿನಲ್ಲಿ ಮುಂದೆ ಬಂದಿದ್ದಾರೆ. ಈ ಅಪಘಾತ ಸಂಭವಿಸಿದಾಗ ನಾನು ಹತ್ತಿರದಲ್ಲಿದ್ದೆ. ನಾವು ಸುಮಾರು 200-300 ಜನರನ್ನು ರಕ್ಷಿಸಿದ್ದೇವೆ’ ಎಂದು ಸ್ಥಳೀಯರಾದ ಗಣೇಶ್ ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.